ಅಣ್ಣಿಗೇರಿ: ರೈತನಿಗೆ ಒಂದಲ್ಲ ಒಂದು ತಾಪತ್ರಯ ಬರುತ್ತಲೇ ಇರುತ್ತೆ. ಅತಿವೃಷ್ಠಿಯಿಂದ ಕಂಗಾಲಾದ ರೈತರಿಗೆ ಈಗ ಮತ್ತೊಂದು ಸಂಕಷ್ಟ ಬಂದೊದಗಿದೆ.
ಹೌದು.. ಹಸು ಮತ್ತು ಎತ್ತುಗಳಲ್ಲಿ ಚರ್ಮ ಹಾಗೂ ಗಂಟು ರೋಗದ ಭಾದೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದು. ದಿನದಿಂದ ದಿನಕ್ಕೆ ರೋಗ ಉಲ್ಬಣಗೊಳ್ಳುತ್ತಿದೆ ಈ ಕಾಯಿಲೆ ರೈತರ ನಿದ್ದೆಗೆಡಿಸಿದೆ. ಹಸುಗಳಲ್ಲಿ ಹಾಲಿನ ಪ್ರಮಾಣ ತುಂಬಾ ಕಡಿಮೆಯಾಗುತ್ತಿದ್ದು ರೈತರು ಚಿಂತಿಸುವಂತಾಗಿದೆ.
ರೋಗ ಹೋಗಲಾಡಿಸಲು ರೈತರು ಪಶು ವೈದ್ಯರ ಮೊರೆ ಹೋಗಿದ್ದಾರೆ. ಅಣ್ಣಿಗೇರಿ ಪಟ್ಟಣ ಹಾಗೂ ತಾಲೂಕಿನ ಗ್ರಾಮಗಳಲ್ಲಿ ಕೆಲವು ರೈತರ ಜಾನುವಾರುಗಳಲ್ಲಿ ಚರ್ಮ ಹಾಗೂ ಗಂಟು ರೋಗ ಹರಡುತ್ತಿದೆ. ಇದ್ದರಿಂದ ರೈತರು ಬೆಚ್ಚಿದಿದ್ದಾರೆ.
ಈಗಾಗಲೇ ಅತಿವೃಷ್ಟಿ ಮಳೆಗೆ ಬೆಳೆಗಳು ಹಾಳಾಗಿ ರೈತ ಕುಸಿದು ಹೋಗಿದ್ದಾನೆ. ಇದ್ರ ಜತೆಗೆ ರೈತನಿಗೆ ಇನ್ನೊಂದು ತಲೆನೋವು ಶರುವಾಗಿದೆ. ಜಾನುವಾರು ಕಾಯಿಲೆಗಳಿ ತುತ್ತಾಗಿ ನರಕ ಅನುಭವಿಸುತ್ತಿವೆ. ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳ ಪಶು ಆಸ್ಪತ್ರೆಗೆ ಜಾನುವಾರುಗಳ ಸಮೇತವಾಗಿ ರೈತರು ಬಂದು ಪಶು ಆಸ್ಪತ್ರೆಯಲ್ಲಿ ಮುಂಜಾಗೃತಾ ಕ್ರಮವಾಗಿ ಲಸಿಕೆ ಹಾಕಿಸುತ್ತಿದ್ದಾರೆ.
ಇನ್ನೂ ರೋಗ ತಗುಲಿದ ಪ್ರಾಣಿಗಳಲ್ಲಿ ಮೊದಲು ಜ್ವರ ಕಾಣಿಸಿಕೊಳ್ಳುತ್ತದೆ. ಒಂದು ವಾರದ ಬಳಿಕ ಚರ್ಮದಲ್ಲಿ ಗಂಟುಗಳು ಕಾಣಿಸಿಕೊಳ್ಳುತ್ತವೆ. ನಂತರ ಚರ್ಮದಲ್ಲಿ ತುರಿಕೆ ಆರಂಭವಾಗುತ್ತಿವೆ. ರೋಗ ಕಾಣಿಸಿಕೊಂಡ ಹಸುಗಳಲ್ಲಿ ಹಾಲಿನ ಪ್ರಮಾಣ ಗಣನೀಯವಾಗಿ ಇಳಿಕೆಯಾಗುತ್ತದೆ. ಅತಿಯಾದ ಜ್ವರ, ಮೂಗು ಮತ್ತು ಕಣ್ಣುಗಳಲ್ಲಿ ಸೋರುವಿಕೆ, ಜೊಲ್ಲು ಸುರಿಸುವುದು, ಮೈಮೇಲೆ ದೊಡ್ಡ ಗಂಟುಗಳ ಬರುವುದು ಈ ರೋಗದ ಪ್ರಮುಖ ಲಕ್ಷಣಗಳ ಆಗಿರುತ್ತದೆ.
ಈ ವಿಷಯವಾಗಿ ಧಾರವಾಡ ಜಿಲ್ಲೆಯ ಉಪ ನಿರ್ದೇಶಕರಾದ ಉಮೇಶ್ ಕೊಂಡಿ ಅವರು ಪಬ್ಲಿಕ್ ನಕ್ಸ್ಟ್ ವರದಿಗಾರರ ಜೊತೆ ಫೋನ್ ಕಾಲ್‌ನಲ್ಲಿ ಮಾತನಾಡಿದ್ದಾರೆ.
Kshetra Samachara
26/09/2022 06:42 pm