ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ದನಕರುಗಳಿಗೂ ಬಂದೈತಿ ಲಿಂಪಿಸ್ಕಿನ್ ರೋಗ:ಕರೋನಾದಂತೆ ಇದಕ್ಕೂ ಸಿಕ್ಕಿಲ್ಲ ಮದ್ದು

ಕಲಘಟಗಿ:ತಾಲೂಕಿನಲ್ಲಿ ದನಕರುಗಳಿಗೂ ಲಿಂಪಿಸ್ಕಿನ್ ಎಂಬ ರೋಗ ಬಂದಿದ್ದು,ಕರೋನಾದಂತೆ ಇದಕ್ಕೂ ಮದ್ದು ಸಿಗದೇ ರೈತರು ಆತಂಕಗೊಂಡಿದ್ದಾರೆ.

ಆಫ್ರಿಕನ್ ದೇಶದ (ಲಿಂಪಿಸ್ಕಿನ್ ಡಿಸೀಸ್) ಗಂಟು ರೋಗದ ವೈರಸ್ ದನಕರುಗಳಿಗೆ ಆವರಿಸಿಕೊಂಡಿದ್ದು,ರೈತರು ಆತಂಕ ಪಡುವಂತಾಗಿದೆ.

ತಾಲ್ಲೂಕಿನ ದ್ಯಾವನಕೊಂಡ, ಹುಣಸಿಕಟ್ಟಿ,ಬೆಲವಂತರ, ತಬಕದಹೊನ್ನಿಹಳ್ಳಿ, ದುಮ್ಮವಾಡ,ಗಳಗಿ ಹುಲಕೊಪ್ಪ,ದೇವಿಕೊಪ್ಪ, ಬಮ್ಮಿಗಟ್ಟಿ,ಗಂಜೀಗಟ್ಟಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ರೋಗ ಕಾಣಿಸಿಕೊಂಡಿದೆ.

ಈಗಾಗಲೇ 450 ರಿಂದ 500 ಜಾನುವಾರುಗಳಲ್ಲಿ ಲಿಂಪಿಸ್ಕಿನ್( ಗಂಟು ರೋಗ ವೈರಸ್ ) ಹರಡಿದೆ.

ಹಿಂದೆ ಇಂತಹ ರೋಗ ಜಾನುವಾರಗಳಿಗೆ ಕಂಡು ಬಂದಿರಲಿಲ್ಲ ಆದರೆ ಈಗ ಜಾನುವಾರುಗಳಿಗೆ ರೋಗ ಕಾಣಿಸಿಕೊಂಡಿದ್ದು ಆತಂಕ ವಾಗಿದೆ ಎಂದು ರೈತ ಶಂಕರ‍ಗೌಡ ಬಾವಿಕಟ್ಟಿ ಪಬ್ಲಿಕ್ ನೆಕ್ಸ್ಟ್ ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪ್ರತ್ಯೇಕವಾದ ಲಸಿಕೆ ಇಲ್ಲದಿರುವುದರಿಂದ ಈ ವೈರಸ್ ನಿಯಂತ್ರಣ ಮಾಡಲು ಪಶು ಸಂಗೋಪನೆ ಇಲಾಖೆ ವೈದ್ಯರು ರೋಗ ಲಕ್ಷಣ ಆಧರಿಸಿ ಚಿಕಿತ್ಸೆ ನೀಡಲು ಮುಂದಾಗಿದ್ದಾರೆ.

ಈ ರೋಗ ಸಂಕ್ರಾಮಿಕವಾಗಿದ್ದು, ಜಾನುವಾರುಗಳನ್ನು ವಾರಗಳ ಕಾಲ ಪ್ರತ್ಯೇಕವಾಗಿ ಇಟ್ಟು,ಪಶು ಆಸ್ಪತ್ರೆಯಿಂದ ಚಿಕಿತ್ಸೆ ಒದಗಿಸ ಬೇಕು ಹಾಗೂ ರೋಗದ ಕುರಿತು ಆತಂಕ ಪಡುವ ಅಗತ್ಯವಿಲ್ಲ ಎಂದು ಕಲಘಟಗಿ ಪಶು ಆಸ್ಪತ್ರೆಯ ಸಹಾಯಕ ನಿದೇಶಕರಾದ ಡಾ.ಎಸ್ ವಿ ಸಂತಿ ತಿಳಿಸಿದರು.(ಮಲ್ಲಿಕಾರ್ಜುನ ಪುರದನಗೌಡರ ಪಬ್ಲಿಕ್ ನೆಕ್ಸ್ಟ್ ಕಲಘಟಗಿ)

Edited By :
Kshetra Samachara

Kshetra Samachara

22/09/2020 09:37 pm

Cinque Terre

66.14 K

Cinque Terre

1

ಸಂಬಂಧಿತ ಸುದ್ದಿ