ನವಲಗುಂದ : ಮಳೆಗಾಲದಲ್ಲಿ ಸೊಳ್ಳೆಗಳ ಹಾವಳಿ ಅಧಿಕ. ಡೆಂಗೆ, ಮಲೇರಿಯಾ, ಜ್ವರದಂತಹ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಹೆಚ್ಚು. ಈ ಹಿನ್ನೆಲೆ ನವಲಗುಂದ ಪುರಸಭೆ ವತಿಯಿಂದ ಹಲವು ಕಡೆಗಳಲ್ಲಿ ಫಾಗಿಂಗ್ ಕಾರ್ಯವನ್ನು ಮಾಡಲಾಯಿತು.
ನವಲಗುಂದ ಪಟ್ಟಣದ ಕಿತ್ತೂರ ರಾಣಿ ಚನ್ನಮ್ಮ ವಸತಿ ಶಾಲೆ, ಎಸ್ಸಿ ಎಸ್ಟಿ ವಸತಿ ಶಾಲೆ, ಬಿ.ಸಿ. ಎಂ ವಸತಿ ಶಾಲೆ ಹಾಗೂ ಪಿಡಬ್ಲ್ಯೂಡಿ ಕ್ವಾಟ್ರಸ್ ಆವರಣದಲ್ಲಿ ಪುರಸಭೆ ಸಿಬ್ಬಂದಿಗಳಿಂದ ಫಾಗಿಂಗ್ ಮಾಡಲಾಯಿತು.
ಈ ವೇಳೆ ಪುರಸಭೆ ಮುಖ್ಯಾಧಿಕಾರಿ ವೀರಪ್ಪ ಹಸಬಿ, ಆರೋಗ್ಯ ಕಿರಿಯ ನಿರೀಕ್ಷಿಕರಾದ ಅಕ್ಕಮಹಾದೇವಿ ಬಣಗಾರ, ಪ್ರವೀಣ್ ಬಿ ಅಗಸಿಮಣಿ ಸೇರಿದಂತೆ ಪುರಸಭೆ ಸಿಬ್ಬಂದಿ ಇದ್ದರು.
Kshetra Samachara
20/08/2022 01:14 pm