ಧಾರವಾಡ: ಶತಮಾನ ಕಂಡ ಇತಿಹಾಸ ಹೊಂದಿರುವ ಧಾರವಾಡದ ಈ ಡಿಮಾನ್ಸ್‌ಗೆ ಅದರದ್ದೇ ಆದ ಹಿರಿಮೆ ಇದೆ. ಆದರೆ ಅದ್ಯಾಕೋ ಸರ್ಕಾರಕ್ಕೆ ಮಾತ್ರ ಈ ಆರೋಗ್ಯ ಕೇಂದ್ರದ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ಖುದ್ದು ಹೈಕೋರ್ಟ್ ಎಚ್ಚರಿಕೆ ಕೊಟ್ಟರೂ ಸಹ ಅಧಿಕಾರಿಗಳು ಇತ್ತ ತಿರುಗಿಯೂ ನೋಡುತ್ತಿಲ್ಲ. ಆ ಕುರಿತ ಒಂದು ಸ್ಟೋರಿ ಇಲ್ಲಿದೆ ನೋಡಿ.
ಈ ಆಸ್ಪತ್ರೆ ಬ್ರಿಟಿಷರ ಕಾಲದಲ್ಲಿಯೇ ಆರಂಭಗೊಂಡಿದೆ. ಸರಿಸುಮಾರು 150ಕ್ಕೂ ಹೆಚ್ಚು ವರ್ಷಗಳ ಇತಿಹಾಸ ಈ ಆಸ್ಪತ್ರೆಗೆ ಇದೆ. ಬ್ರಿಟೀಷ ಆಳ್ವಿಕೆ ಕಾಲದಲ್ಲಿ ಬ್ರಿಟೀಷರ ಸೈನಿಕರು ಯದ್ಧಗಳಿಂದ ಮಾನಸಿಕ ವ್ಯಾದಿಗೆ ಒಳಗಾದಾಗ ಆರೈಕೆ ನೀಡುತ್ತಿದ್ದ ಕೇಂದ್ರವಿದು, ಸದ್ಯ ಈ ಡಿಮಾನ್ಸ್ ಉತ್ತರ ಕರ್ನಾಟಕ ಭಾಗದ 15ಕ್ಕೂ ಹೆಚ್ಚು ಜಿಲ್ಲೆಗಳ ಜನರ ಮಾನಸಿಕ ಆರೋಗ್ಯದ ಆರೈಕೆ ಮಾಡುವ ಕೇಂದ್ರವಾಗಿದೆ. ಆದರೆ ಇಂತಹ ಕೇಂದ್ರದ ಬಗ್ಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಲೇ ಬಂದು ಸೂಕ್ತ ಸೌಲಭ್ಯಗಳನ್ನು ನೀಡುತ್ತಿಲ್ಲ. ಇನ್ನು ಇದನ್ನು ಸರಿಯಾಗಿ ನಡೆಸೋದಕ್ಕೆ ಸೂಪರಿಡೆಂಟ್ ಸಹ ನೀಡಿಲ್ಲ. ಇದೇ ವಿಷಯವಾಗಿ ಸರ್ಕಾರವನ್ನೂ ಈಗ ಬೆಂಗಳೂರಿನ ಹೈಕೋರ್ಟ್ ತರಾಟೆಗೆ ತೆಗೆದುಕೊಂಡಿದೆ.
ಕಳೆದ ಕೆಲವು ವರ್ಷಗಳ ಹಿಂದೆ ಭಾರತೀಯ ವೈದ್ಯಕೀಯ ಕೌನ್ಸಿಲ್ ಮಂಡಳಿ ಡಿಮಾನ್ಸ್‌ಗೆ ಭೇಟಿ ನೀಡಿದಾಗ ಕೆಲವೊಂದು ಸೌಕರ್ಯಗಳನ್ನು ನೀಡುವಂತೆ ಶಿಫಾರಸ್ಸು ಮಾಡಿತ್ತು. ಆದರೆ ಅವುಗಳನ್ನು ಪೂರೈಸುವಲ್ಲಿ ಸರ್ಕಾರ ವಿಳಂಬ ಮಾಡಿತ್ತು. ಹೀಗಾಗಿ ಆಗಿನಿಂದಲೇ ಹೈಕೋರ್ಟ್ ಡಿಮಾನ್ಸ್ ವಿಷಯದಲ್ಲಿ ಸರ್ಕಾರದ ಮೇಲೆ ಗರಂ ಆಗುತ್ತಲೇ ಬಂದಿದೆ. ಎಂಐಆರ್ ಸಿಟಿ ಸ್ಕ್ಯಾನ್ ಯಂತ್ರ ಒದಗಿಸದೇ ಇರೋದಕ್ಕೆ ಹಾಗೂ ಮೆಡಿಕಲ್ ಸೂಪರಿಂಟೆಂಡೆಂಟ್ ನೇಮಕ ಮಾಡುವಲ್ಲಿ ತೋರಿದ ನಿರ್ಲಕ್ಷ್ಯದ ಬಗ್ಗೆ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ ಅವರು ಗರಂ ಆಗಿದ್ದರು. ಇಷ್ಟೆಲ್ಲ ಆದ ಬಳಿಕವೂ ಸರ್ಕಾರ ಡಿಮಾನ್ಸ್ ಬಗ್ಗೆ ನಿರ್ಲಕ್ಷ್ಯ ವಹಿಸೋದಕ್ಕೆ ಇದು ಉತ್ತರ ಕರ್ನಾಟಕದಲ್ಲಿದೆ ಅನ್ನೋದೇ ಕಾರಣ ಅಂತಾ ಸ್ಥಳೀಯರು ಆರೋಪಿಸುತ್ತಿದ್ದಾರೆ. ಹುಬ್ಬಳ್ಳಿಯ ಕಿಮ್ಸ್‌ನಿಂದ ಪ್ರಭಾರಿ ಆಗಿ ನೇಮಕೊಂಡಿರುವ ಡೈರೆಕ್ಟರ್ ಅಡಿಯಲ್ಲಿ. ಇದುಸಹ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಒಟ್ಟಾರೆಯಾಗಿ ಖುದ್ದು ಹೈಕೋರ್ಟ್ ಗೌರವಾನ್ವಿತ ನ್ಯಾಯಮೂರ್ತಿಗಳೇ ಖಡಕ್ ವಾರ್ನಿಂಗ್ ಕೊಟ್ಟಿದ್ದರೂ ಸಹ ಸರ್ಕಾರ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳು ಡಿಮಾನ್ಸ್‌ಗೆ ಸೌಲಭ್ಯಗಳನ್ನು ನೀಡುವ ವಿಷಯದಲ್ಲಿ ನಿರ್ಲಕ್ಷ್ಯ ವಹಿಸುತ್ತಲೇ ಬರತ್ತಾ ಇದ್ದು, ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ.
Kshetra Samachara
10/11/2021 02:29 pm