ನವಲಗುಂದ: ನವಲಗುಂದ ಪಟ್ಟಣದ ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಕಾಲೇಜಿನ ವಿವಿಧ ಘಟಕಗಳು ಹಾಗೂ ಬ್ಲಡ್ ಬ್ಯಾಂಕ್, ಕ್ಯಾನ್ಸರ್ ಆಸ್ಪತ್ರೆ, ನವನಗರ ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಸುಮಾರು 40ಕ್ಕಿಂತ ಹೆಚ್ಚಿನ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಭಾಗಿಯಾಗಿದ್ದರು.
ಈ ವೇಳೆ ಶ್ರೀ ಶಂಕರ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಕೆ.ಪಿ ಬಿಕ್ಕಣ್ಣವರ, ಹುಬ್ಬಳ್ಳಿ ನವನಗರ ಕ್ಯಾನ್ಸರ್ ಆಸ್ಪತ್ರೆಯ ಹಿರಿಯ ವೈದ್ಯರು ಡಾ.ಉಮೇಶ್ ಹಳ್ಳಿಕೇರಿ, ಹುಬ್ಬಳ್ಳಿ ನವನಗರ ಕ್ಯಾನ್ಸರ್ ಆಸ್ಪತ್ರೆಯ ಸಿಬ್ಬಂದಿ, ಸ್ಕೌಟ್ಸ್ & ಗೈಡ್ಸ್ ಅಧಿಕಾರಿಗಳಾದ ಡಾ.ಎಸ್.ಎಮ್. ತುಬಚಿ, ಎನ್.ಸಿ.ಸಿ. ಅಧಿಕಾರಿಗಳಾದ ಡಾ.ಆರ್.ಪಿ. ಚವ್ಹಾಣ, ಎನ್.ಎಸ್.ಎಸ್ ಅಧಿಕಾರಿಗಳಾದ ಡಾ. ಎಮ್. ಎಸ್ ಹಾರೋಗೇರಿ, ರೆಡ್ ಕ್ರಾಸ್ ಅಧಿಕಾರಿಗಳಾದ ಡಾ. ಜಿ.ಎಸ್, ಚಿಣಗಿ ಸೇರಿದಂತೆ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
27/07/2022 01:36 pm