ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಶಾಲೆ ರಜಾ ಮಕ್ಕಳ ಕಲಿಕಾ ಉತ್ಸಾಹದ ಸಂತೋಷಕ್ಕಿಲ್ಲ ರಜಾ !

ಕುಂದಗೋಳ: ಹಳ್ಳಿ ಮಕ್ಕಳ ಕಲಿಕಾ ಆಸಕ್ತಿ ಹಾಗೂ ಕಲಿಸುವವರ ಉತ್ಸಾಹ ನೋಡಿದ್ರೆ ಹಳ್ಳಿ ಮಕ್ಕಳು ದಿಲ್ಲಿ ಮಟ್ಟದಲ್ಲಿ ಸಾಧನೆ ಮಾಡುವ ನಿರೀಕ್ಷೆ ಇನ್ನಷ್ಟು ಗರಿಗೆದರಿದೆ. ಬೇಸಿಗೆಯ ಕಾರಣ ಶಾಲೆಗಳು ರಜೆ ಇವೆ. ಈ ದಿನಗಳಲ್ಲಿ ಮಕ್ಕಳಿಗೆ ತಮ್ಮೂರು ರೊಟ್ಟಿಗವಾಡದಲ್ಲೇ ಯೋಗದ ಹಲವು ಆಸನಗಳು ಏರೋಬಿಕ್ ಡ್ಯಾನ್ಸ್, ಶೈಕ್ಷಣಿಕ ಅಭ್ಯಾಸ ಅದೇ ರಜೆ ನೀಡಿದ ಶಾಲಾ ಆವರಣದಲ್ಲೇ ಬೆಳಿಗ್ಗೆ 6 ಗಂಟೆಗೆ ಉಚಿತವಾಗಿ ನಡೆದಿದೆ.

ಈ ರೀತಿಯಾದ ಮಕ್ಕಳ ಏಳ್ಗೆಗೆ ರೊಟ್ಟಿಗವಾಡ ಗ್ರಾಮದ ಕರ್ನಾಟಕ ವಿಶ್ವ ವಿದ್ಯಾಲಯದ ಯೋಗ ಡಿಪ್ಲೊಮಾ ವಿದ್ಯಾರ್ಥಿಗಳಾದ ಸಾವಿತ್ರಿ ಹಿರೇಗೌಡರ, ದ್ಯಾಮಕ್ಕ ಸಂಗಳದ, ರಮೇಶ್ ಮಡಿವಾಳರ ತಮ್ಮೂರಿನ ಮಕ್ಕಳು ಜಾಣರಾಗಲಿ ಎಂಬ ಸದುದ್ದೇಶ ಹೊತ್ತು ರಜೆ ಅವಧಿಯಲ್ಲಿ ಎಲ್ಲಾ ವಯೋಮಾನದ ಮಕ್ಕಳಿಗೆ ಶಾಲಾ ಪಠ್ಯೇತರ ಚಟುವಟಿಕೆಯ ಶಿಕ್ಷಣವನ್ನು ಸ್ವಯಂ ಪ್ರೇರಿತರಾಗಿ ನೀಡುತ್ತಿದ್ದಾರೆ.

ಯೋಗಾಭ್ಯಾಸ, ಶೈಕ್ಷಣಿಕ ಅಭ್ಯಾಸ, ಡ್ಯಾನ್ಸ್, ಹಾಡಿನಂತಹ ಚಟುವಟಿಕೆಗಳಲ್ಲಿ ಮಕ್ಕಳು ಅಷ್ಟೇ ಉತ್ಸಾಹದಿಂದ ಪಾಲ್ಗೊಂಡಿದ್ದು ತಮ್ಮೂರಿನ ಮಕ್ಕಳಿಗಾಗಿ ಸ್ವಯಂ ಸೇವೆ ನೀಡುತ್ತಿರುವ ಕಾಲೇಜು ವಿದ್ಯಾರ್ಥಿಗಳಿಗೆ ಜನ ಭೇಷ್ ಎಂದಿದ್ದಾರೆ.

Edited By : Manjunath H D
Kshetra Samachara

Kshetra Samachara

05/05/2022 03:04 pm

Cinque Terre

20.98 K

Cinque Terre

0

ಸಂಬಂಧಿತ ಸುದ್ದಿ