ಧಾರವಾಡ: ಧಾರವಾಡ ನಗರ, ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಶಾಲಾ ಮಕ್ಕಳಿಗೆ ಹರಡುತ್ತಿದ್ದ ಕೊರೊನಾ ನಿಯಂತ್ರಣಕ್ಕೆ ತರುವ ಉದ್ದೇಶದಿಂದ ಜಿಲ್ಲಾಧಿಕಾರಿಗಳು ಕಳೆದ ಜ.13 ರಂದು ಈ ವ್ಯಾಪ್ತಿಯ ಅಂಗನವಾಡಿ, ಎಲ್‌ಕೆಜಿ, ಯುಕೆಜಿ ಹಾಗೂ 1 ರಿಂದ 8 ನೇ ತರಗತಿವರೆಗೆ ಘೋಷಿಸಿದ್ದ ರಜೆ ಆದೇಶವನ್ನು ಹಿಂಪಡೆದು, ಶಾಲೆಗಳ ಪುನರಾರಂಭಕ್ಕೆ ಆದೇಶ ನೀಡಿದ್ದಾರೆ.
ಶಾಲೆಗಳ ಪುನರಾರಂಭದ ಕುರಿತು ನಿಯಮಿತವಾಗಿ ಸಕ್ಷಮ ಪ್ರಾಧಿಕಾರಕ್ಕೆ ವರದಿ ಸಲ್ಲಿಸಬೇಕು, ರಜೆ ಘೋಷಿಸಿದ್ದ ಶಾಲೆಗಳನ್ನು ಸ್ಯಾನಿಟೈಜೇಷನ್ ಮಾಡಬೇಕು, ಸೋಂಕಿತ ವಿದ್ಯಾರ್ಥಿಯ ಆರೋಗ್ಯವನ್ನು ದಿನಂಪ್ರತಿ ವಿಚಾರಿಸಬೇಕು, ವಿದ್ಯಾರ್ಥಿಗಳು ಕಡ್ಡಾಯವಾಗಿ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.
Kshetra Samachara
22/01/2022 05:33 pm