ಹುಬ್ಬಳ್ಳಿ: ಕೋವಿಡ್ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲೆಯಲ್ಲಿ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಜಿಲ್ಲಾಡಳಿತ ರಜೆ ನೀಡಿದೆ. ಆದರೆ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಕಾಲೇಜು ಕಾರ್ಯಾರಂಭವಾಗಿದ್ದು, ಈಗ ನಗರದ ಶಾಲೆ ಹಾಗೂ ಕಾಲೇಜುಗಳಲ್ಲಿ ಕೊರೋನಾ ಸ್ಫೋಟಗೊಂಡಿದೆ.
ಗೋಕುಲ್ ರಸ್ತೆಯ ಪ್ರಿಯದರ್ಶಿನಿ ಕಾಲೋನಿಯ ಡಾ.ಆರ್.ಬಿ.ಪಾಟೀಲ್ ಮಹೇಶ್ ಪಿಯು ಕಾಲೇಜಿನ 53 ವಿದ್ಯಾರ್ಥಿಗಳಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಹಳೇ ಹುಬ್ಬಳ್ಳಿಯ ಸೇಂಟ್ ಮಿಷೇಲ್ಸ್ ಹೈಸ್ಕೂಲ್‌ನ 12 ವಿದ್ಯಾರ್ಥಿಗಳು ಮತ್ತು ಜೀವೇಶ್ವರ ಪ್ರೌಢಶಾಲೆಯ 12 ವಿದ್ಯಾರ್ಥಿಗಳಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಸೋಂಕು ದೃಢಪಡುತ್ತಿದಂತೆ ತಾಲೂಕ ಆಡಳಿತ ಪ್ರಿಯದರ್ಶಿನಿ ಕಾಲೋನಿಯ ಡಾ.ಆರ್.ಬಿ.ಪಾಟೀಲ್ ಮಹೇಶ್ ಪಿಯು ಕಾಲೇಜು, ಸೇಂಟ್ ಮಿಷೇಲ್ಸ್ ಹೈಸ್ಕೂಲ್ ಮತ್ತು ಜೀವೇಶ್ವರ ಹೈಸ್ಕೂಲ್ ಅನ್ನು ಸೀಲ್ ಡೌನ್ ಮಾಡಿದೆ.
Kshetra Samachara
21/01/2022 08:28 pm