ಹುಬ್ಬಳ್ಳಿ: ಇಷ್ಟು ದಿನ ಮನೆಯಲ್ಲಿ ಕುಳಿತುಕೊಂಡು ಅರ್ಥವಾಗದ ಮೊಬೈಲ್ ನಲ್ಲಿ ಆನ್ ಕ್ಲಾಸ್ ಕಲಿಯುತ್ತಿದ್ದ ಮಕ್ಕಳಿಗೆ ನಿರಾಳತೆ ಸಿಕ್ಕಂತಾಗಿದೆ. ಅಲ್ಲದೇ ಇಷ್ಟು ದಿನ ರೇಷನ್ ತೆಗೆದುಕೊಂಡು ಬಂದು ಮನೆಯಲ್ಲಿ ಊಟ ಮಾಡುತ್ತಿದ್ದ ಮಕ್ಕಳಿಗೆ ಮತ್ತೊಮ್ಮೆ ಬಿಸಿಯೂಟ ಹಾಗೂ ಹಾಲು ಕುಡಿಯುವ ಸೌಭಾಗ್ಯ ಬಂದೊದಗಿದೆ.
ಕಿಲ್ಲರ್ ಕೊರೋನಾ ವೈರಸ್ ಎಷ್ಟರಮಟ್ಟಿಗೆ ಜನರನ್ನು ಕಾಡಿದೆ ಎಂದರೇ ನಿಜಕ್ಕೂ ಅಂತಹದೊಂದು ದಿನ ಇತ್ತು ಎಂದುಕೊಂಡರೇ ಇಂದಿಗೂ ಮೈಯಲ್ಲಿರುವ ರೋಮಗಳು ನೆಟ್ಟಗಾಗುತ್ತವೆ. ಅಷ್ಟರಮಟ್ಟಿಗೆ ಕಿಲ್ಲರ್ ಕೋರೋನಾ ವೈರಸ್ ಕಾಡಿತ್ತು. ಅಲ್ಲದೇ ಏನು ಅರಿಯದ ಮುಗ್ಧ ಮಕ್ಕಳು ಶಾಲೆಯ ಅಂಗಳದಲ್ಲಿ ಆಟವಾಡಿ ಕಲಿಯುತ್ತಿದ್ದ ದಿನಗಳಿಗೆ ಕಿಲ್ಲರ್ ಕೋರೋನಾ ವೈರಸ್ ಸಂಕಷ್ಟ ತಂದೊಡ್ಡಿದ್ದು,ಮಕ್ಕಳ ವ್ಯಕ್ತಿತ್ವ ವಿಕಸನ ಕೂಡ ಕುಂಠಿತಗೊಂಡಿತ್ತು. ಆದರೆ ಈಗ ಕೊರೋನಾ ಹಾವಳಿ ತಗ್ಗಿದ್ದು, ಮಕ್ಕಳು ಮತ್ತೊಮ್ಮೆ ಶಾಲೆಯತ್ತ ಮುಖಮಾಡುವಂತೆ ಮಾಡಿದೆ. ಅಲ್ಲದೇ ಬಿಸಿಯೂಟ ಹಾಗೂ ಕ್ಷೀರ ಭಾಗ್ಯ ಯೋಜನೆಯ ಸದುಪಯೋಗವನ್ನು ಕೂಡ ಮಕ್ಕಳು ಪಡೆದುಕೊಳ್ಳುವಂತ ದಿನ ಸನ್ನಿಹಿತವಾಗುತ್ತಿದೆ.
ಅರ್ಥವಾಗದ ಆನ್ ಲೈನ್ ಕ್ಲಾಸಿನಲ್ಲಿ ಪಾಲಕರ ಒತ್ತಾಯಕ್ಕೆ ಮಣಿದು ಓದುವ ಮಕ್ಕಳು ಅಂಗಳದಲ್ಲಿ ಆಡುವ ಪರಿಪಾಠವನ್ನೇ ಮರೆತಿದ್ದರು. ಅಲ್ಲದೇ ಅಕ್ಕ ಪಕ್ಕದ ಮನೆಯ ಮಕ್ಕಳೊಂದಿಗೆ ಬೆರೆಯುವುದಕ್ಕೂ ಕೂಡ ಈ ಕಿಲ್ಲರ್ ಕೊರೋನಾ ವೈರಸ್ ಬ್ರೇಕ್ ಹಾಕಿತ್ತು. ಆದರೆ ಈಗ ಹಾವಳಿ ತಗ್ಗಿರುವ ಹಿನ್ನಲೆಯಲ್ಲಿ ಶಾಲೆ ಆರಂಭಕ್ಕೆ ಸರ್ಕಾರ ಕೆಲವೊಂದು ಮಾರ್ಗಸೂಚಿ ನಡುವೆ ಶಾಲೆ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು, ಯಥಾಸ್ಥಿತಿಯಲ್ಲಿ ಶಾಲೆ ಆರಂಭಗೊಳ್ಳಲಿವೆ.
ಒಟ್ಟಿನಲ್ಲಿ ಇಂತಹದೊಂದು ವೈರಸ್ ಮನುಕುಲಕ್ಕೆ ಮಾರಕವಾಗಿ ಕಾಡಿದ್ದು, ಅಕ್ಷರಶಃ ಸತ್ಯ. ಮತ್ತೊಮ್ಮೆ ಇಂತಹ ವೈರಸ್ ಭಾರತಕ್ಕೆ ಮಾತ್ರವಲ್ಲದೆ ವಿಶ್ವ ಮನುಕುಲಕ್ಕೆ ಬಾರದೆ ಇರಲಿ ಎಂಬುವುದು ನಮ್ಮ ಆಶಯ...
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
22/10/2021 10:08 am