ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ವಾಸವಿ ಜಯಂತಿ ಪ್ರಯುಕ್ತ ಹಣ್ಣು ಹಂಪಲ ವಿತರಣೆ

ನವಲಗುಂದ : ನವಲಗುಂದ ಪಟ್ಟಣದ ತಾಲೂಕಾ ಸರ್ಕಾರಿ ಆಸ್ಪತ್ರೆಯಲ್ಲಿರುವಂತಹ ಒಳ ರೋಗಿಗಳಿಗೆ ಮತ್ತು ಪೆಟ್ರೋಲ್ ಬಂಕ್ ಹಿಂದುಗಡೆಯಿರುವ ಬಡ ಕಾರ್ಮಿಕರಿಗೆ ವಾಸವಿ ಜಯಂತಿ ಪ್ರಯುಕ್ತ ಮಹಾಂಕಾಳಿಯವರ ಕುಟುಂಬದ ವತಿಯಿಂದ ಹಣ್ಣು ಹಂಪಲ ವಿತರಣೆ ಮಾಡಲಾಯಿತು.

ಈ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ವಾಸವಿ ಜಯಂತಿಯ ಅಂಗವಾಗಿ ಆಸ್ಪತ್ರೆಯಲ್ಲಿರುವ ಒಳ ರೋಗಿಗಳಿಗೆ ಹಾಗೂ ಬಡ ಕಾರ್ಮಿಕರಿಗೆ ಹಣ್ಣು ಹಂಪಲ ವಿತರಣೆ ಮಾಡುತ್ತಿರುವಂತಹ ಮಹಾಂಕಾಳಿಯವರ ಕುಟುಂಬದ ಕೆಲಸ ನಿಜಕ್ಕೂ ಶ್ಲಾಘನೀಯ, ತಮ್ಮ ಕುಲದೇವತೆಯಾದ ಶ್ರೀ ವಾಸವಾಂಬ ಜಯಂತಿಯ ಸಂದರ್ಭದಲ್ಲಿ ನಮ್ಮಂತೆ ಇತರರು ಕೂಡಾ ಸಂತೋಷವಾಗಿರಬೇಕು ಮತ್ತು ಆಸ್ಪತ್ರೆಯಲ್ಲಿರುವಂತಹ ರೋಗಿಗಳು ಬೇಗನೆ ಗುಣಮುಖರಾಗಿ ಮನೆಗೆ ಮರಳಬೇಕು. ಎಂದು ಹಾರೈಕೆ ಮಾಡಿ, ಅವರಿಗೆ ಹಣ್ಣು ಹಂಪಲ ನೀಡಿರುವಂತಹ ಕುಟುಂಬಕ್ಕೆ ಆ ತಾಯಿ ಸಿರಿ ಸಂಪತ್ತು ಕೊಟ್ಟು ಕಾಪಾಡಲಿ ಎಂದರು.

ಈ ಸಂದರ್ಭದಲ್ಲಿ ತಾಲೂಕಾ ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ:ರೂಪಾ ಕಿಣಗಿ, ರಾಮಚಂದ್ರ ಬೈಲೂರು, ರಾಘವೇಂದ್ರ ಹೆಬಸೂರ, ಮಂಜು ಬೈಲೂರ, ಶ್ರೀನಿಧಿ, ಸುಲೇಮಾನ್ ನಾಶೀಪುಡಿ,ಶಂಕರಗೌಡ ಹುಡೆದಮನಿ, ರವಿ ಬೆಂಡಿಗೇರಿ, ಹಣಮಂತ ವಾಲಿಕಾರ ಶ್ರೀಕಾಂತ್ ಬರೋಜಿ, ಪುಟ್ಟು ಹಿರಗಣ್ಣವರ, ನಿಂಗಪ್ಪ ಕುಂಬಾರ, ಬಸು ಹಿಂದಿನಮನಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

11/05/2022 04:08 pm

Cinque Terre

15.66 K

Cinque Terre

0

ಸಂಬಂಧಿತ ಸುದ್ದಿ