ಹುಬ್ಬಳ್ಳಿ: ಸಾಮಾನ್ಯವಾಗಿ ಕಾಲೇಜು ದಿನಗಳಲ್ಲಿ ನಾವು ಕ್ರೀಡೆಗಳಲ್ಲಿ ಪಾಲ್ಗೊಳ್ಳುತ್ತೇವೆ. ಆ ನಂತರ ನೌಕರಿ, ದುಡಿಮೆ, ಸಂಸಾರ, ಮಕ್ಕಳು ಎನ್ನುತ್ತ ಕ್ರೀಡಾ ಮನೋಭಾವದಿಂದ ವಿಮುಖರಾಗುತ್ತಾರೆ. ಹೀಗಾಗಿ ವಯಸ್ಸು ನಲವತ್ತಾಗುತ್ತಲೇ ಬೊಜ್ಜು, ಮಂಡಿ-ಕೀಲು ನೋವು ಅದು-ಇದು ಶುರುವಾಗುತ್ತೆ. ಸದ್ಯ ಕೊರೊನಾ ದಿನಗಳಲ್ಲಂತೂ ಜನ ದೈಹಿಕ ಕಸರತ್ತಿನಿಂದ ದೂರವಾಗಿದ್ದಾರೆ. ಹೀಗಾಗಿ ಅವರೆಲ್ಲರನ್ನೂ ಮತ್ತೆ ಮೈದಾನಕ್ಕೆ ಕರೆತರುವ ಪ್ರಯತ್ನದ ಭಾಗವಾಗಿ ಹುಬ್ಬಳ್ಳಿಯ ಸತ್ವಂ ಫಿಸಿಯೋತೆರಪಿ & ಹೆಲ್ತ್ ಕ್ಲಿನಿಕ್ ಸಹಯೋಗದಲ್ಲಿ ಸಾರಿ-ಲುಂಗಿ ರನ್ ಆಯೋಜಿಸಲಾಗಿತ್ತು. ಸ್ಪರ್ಧೆಯ ಆಯೋಜಕಿ ಫಿಸಿಯೋತೆರಪಿಸ್ಟ್ ವಿಜೇತಾ ಹಳಪೇಟ್ ಹರಪನಹಳ್ಳಿ ಪಬ್ಲಿಕ್ ನೆಕ್ಸ್ಟ್ ಜೊತೆ ಮಾತನಾಡಿ ತಮ್ಮ ಖುಷಿ ಹಂಚಿಕೊಂಡಿದ್ದು ಹೀಗೆ.
ಆಧುನಿಕತೆ ಬೆಳೆದಂತೆಲ್ಲ ನಮ್ಮ ಮೂಲ ಸಂಸ್ಕೃತಿ ಮರೆಯಾಗುತ್ತ ಜನ ಸಾಂಪ್ರದಾಯಿಕ ಉಡುಗೆ-ತೊಡುಗೆಗಳನ್ನು ಬಹುತೇಕ ಮರೆತಿದ್ದಾರೆ ಎನ್ನಬಹುದು. ಹೀಗಾಗಿ ಈ ಸ್ಪರ್ಧೆಯಲ್ಲಿ ಸ್ತ್ರೀಯರು ಸೀರೆ, ಪುರುಷರು ಲುಂಗಿ ಧರಿಸಿ ಓಡುವುದನ್ನು ಕಡ್ಡಾಯಗೊಳಿಸಲಾಗಿತ್ತು.
ಈ ಸ್ಪರ್ಧೆಯಲ್ಲಿ ಹುಬ್ಬಳ್ಳಿಯ ದೀಪಕ್ ಖಟಾವಕರ್ ಹಾಗೂ ಧಾರವಾಡದ ಶಾರೊನ್ ಅವರು ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಮಕ್ಕಳ ವಿಭಾಗದಲ್ಲಿ ನವಮಿ ಪಟೇಲ್, ಉನ್ನತಿ ಸಿಂಘಿ, ದೀಪ್ ಪಟೇಲ್ ವಿಜೇತರಾಗಿದ್ದಾರೆ.
ಇನ್ನು ಹಿರಿಯ ನಾಗರಿಕರ ವಿಭಾಗದಲ್ಲಿ 70 ವರ್ಷ ವಯಸ್ಸಿನ ಭವಾನಿ ಭಂಡಾರಿ ಹಾಗೂ 82 ವರ್ಷ ವಯಸ್ಸಿನ ವಿರುಪಾಕ್ಷ ಪಾಟೀಲ್ ವಿಜೇತರಾಗಿದ್ದಾರೆ. ಉತ್ತಮ ಡ್ರೆಸ್ ವಿಭಾಗದಲ್ಲಿ ಡಾ. ಅರ್ಪಿತಾ ಹೆಗ್ಡೆ ನಾಡಗೌಡ ಹಾಗೂ ಆನಂದ್ ಬೈದ್ ಆಯ್ಕೆಯಾಗಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
03/04/2022 09:08 pm