ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಅಂಗವಿಕಲರ ಬದುಕಿನಲ್ಲಿ ಸ್ವಾವಲಂಬನೆ ಸೃಷ್ಟಿಸುತ್ತಿರುವ ಮಹಾವೀರ ಲಿಂಬ ಸಂಸ್ಥೆ

ಹುಬ್ಬಳ್ಳಿ: ಅವರೆಲ್ಲ ಯಾವುದೊ ಒಂದು ಅಹಿತಕರ ಘಟನೆಯಿಂದ ಕಾಲು ಕಳೆದುಕೊಂಡು ಅಂಗವಿಕಲರಾದವರು.ಆದರೇ ಅಂಗವಿಕಲತೆಯಿಂದ ಬಳಲುತ್ತಿರುವವರಿಗೆ ಧೈರ್ಯ ತುಂಬಿ ನವಜೀವನ ನೀಡುವಲ್ಲಿ ಹುಬ್ಬಳ್ಳಿ ಸಂಸ್ಥೆಯೊಂದು ಶ್ರಮವಹಿಸುತ್ತಿದೆ.

ವಾಣಿಜ್ಯನಗರಿ ಹುಬ್ಬಳ್ಳಿಯ ಕಿಮ್ಸ್ ಆವರಣದಲ್ಲಿರುವ ಮಹಾವೀರ ಲಿಂಬ ಸೆಂಟರ್ ಕೃತಕ ಕಾಲು ವಿತರಣೆ ಮಾಡುವ ಮೂಲಕ ಅಂಗವಿಕಲರ ಶ್ರೇಯೊಭಿವೃದ್ದಿಗೆ ಉಚಿತವಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದು,ಈಗಾಗಲೇ ನೂರಾರು ಶಿಬಿರಗಳನ್ನು ಮಾಡುವ ಮೂಲಕ ಜನಸೇವೆಯತ್ತ ದಾಪುಗಾಲು ಹಾಕುತ್ತಿದೆ.

ಈ ಸಂಸ್ಥೆಯ ಕಾರ್ಯಕ್ಕೆ ಲೈನ್ಸ್ ಕ್ಲಬ್,ರೋಟರಿ ಕ್ಲಬ್,ಇನ್ನರ್ ವೀಲ್ ಸಂಸ್ಥೆಗಳು ಕೈ ಜೋಡಿಸುತ್ತ ಅಂಗವಿಕಲರ ಬಾಳಿಗೆ ಬೆಳಕಾಗುತ್ತಿವೆ.

ಇಂತಹದೊಂದು ಮಹತ್ವದ ಕಾರ್ಯ ಹುಬ್ಬಳ್ಳಿಯಲ್ಲಿ ನಡೆಯುತ್ತಿರುವುದು ಹುಬ್ಬಳ್ಳಿ ಕೀರ್ತಿಯನ್ನು ಮತ್ತಷ್ಟು ಇಮ್ಮಡಿಗೊಳಿಸಿದೆ.

ಈಗಾಗಲೇ ರಾಜ್ಯದ ಮೂಲೆ ಮೂಲೆಯಿಂದ ಅಂಗವಿಕಲ ಪಲಾನುಭವಿಗಳು ಹುಬ್ಬಳ್ಳಿಗೆ ಆಗಮಿಸಿ ಕೃತಕ ಕಾಲು ಪಡೆದುಕೊಳ್ಳುವ ಮೂಲಕ ಸ್ವಂತ ಕಾಲು ಮೇಲೆ ನಿಲ್ಲುತ್ತಿದ್ದಾರೆ.

ಇಂದು ಕೂಡ ವೈದ್ಯರಾದ ರವಿ ನಾಡಗೇರ ಅವರ ಜನ್ಮದಿನದ ಅಂಗವಾಗಿ 15 ಜನರಿಗೆ ಕೃತಕ ಕಾಲು ವಿತರಣೆ ಮಾಡಲಾಯಿತು.

ಅಲ್ಲದೇ ವಿದ್ಯಾರ್ಥಿ ಹಾಗೂ ಮಾಜಿ ಸೈನಿಕರೊಬ್ಬರು ಈ ಸೇವೆಯನ್ನು ಪಡೆದುಕೊಂಡಿರುವುದು ವಿಶೇಷವಾಗಿದೆ.

ಅಂಗವಿಕಲರು ಕೂಡ ಸ್ವಾವಲಂಬಿಯಾಗಿ ಜೀವನ ನಡೆಸಬೇಕು ಎಂಬುವಂತ ಸದುದ್ದೇಶದಿಂದ ಉಚಿತವಾಗಿ ಕೃತಕ ಕಾಲು ವಿತರಣೆ ಮಾಡುವ ಮೂಲಕ ಮಹಾವೀರ ಲಿಂಬ ಸಂಸ್ಥೆ ಕಾರ್ಯನಿರ್ವಹಿಸುತ್ತಿದ್ದು,ಇನ್ನೂ ಹೆಚ್ಚೆಚ್ಚು ಜನರು ಇದರ ಸದುಪಯೋಗ ಪಡೆದುಕೊಳ್ಳಲಿ ಎಂಬುವುದೇ ನಮ್ಮ ಆಶಯ.

Edited By : Manjunath H D
Kshetra Samachara

Kshetra Samachara

17/12/2020 04:26 pm

Cinque Terre

45.8 K

Cinque Terre

0

ಸಂಬಂಧಿತ ಸುದ್ದಿ