ಹುಬ್ಬಳ್ಳಿ: ಪಟಾಕಿ ಹಚ್ಚುತ್ತಿದ್ದ ವೇಳೆಯಲ್ಲಿ ಪಟಾಕಿಯೊಂದು (ಶೆಲ್ ಪಟಾಕಿ) ಆಕಸ್ಮಿಕವಾಗಿ ಯುವಕನ ಎದೆಗೆ ತಾಗಿದ ಪರಿಣಾಮ ಯುವಕನೊಬ್ಬ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಈಗಷ್ಟೇ ನಡೆದಿದೆ.
ಕುಂದಗೋಳ ತಾಲ್ಲೂಕಿನ ಗುರುವಿನಹಳ್ಳಿ ಗ್ರಾಮದಲ್ಲಿ ಸಾರ್ವಜನಿಕ ಗಣಪತಿ ಕಳಿಸುವಾಗ ಹಚ್ಚಿದ ಪಟಾಕಿ(ಶೆಲ್) ಮಂಜುನಾಥ ಎಂಬ ಯುವಕನ ಎದೆಗೆ ತಾಗಿದ ಪರಿಣಾಮ ತೀವ್ರವಾಗಿ ಅಶ್ವಸ್ಥನಾಗಿದ್ದಾನೆ.
ಕೂಡಲೇ ಮಂಜುನಾಥನನ್ನು ಕುಂದಗೋಳ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದು ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದ್ದು, ಕುಂದಗೋಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Kshetra Samachara
05/09/2022 02:10 pm