ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : Wellness Forever ಫಾರ್ಮಸಿ ಎಡವಟ್ಟು... ಹಾರಿತು ಅಮಾಯಕನ ಪ್ರಾಣ ಪಕ್ಷಿ.

ಹುಬ್ಬಳ್ಳಿ : ಮೆಡಿಕಲ್ ಶಾಪ್ ಎಡವಟ್ಟಿನಿಂದಾಗಿ ಅಮಾಯಕ ವ್ಯಕ್ತಿಯು ಮೃತಪಟ್ಟ ಘಟನೆ ಮೇ 24 ರಂದು ನಡೆದಿದೆ. ತಮ್ಮ ತಂದೆಯ ಸಾವಿಗೆ Wellness Forever ಫಾರ್ಮಸಿಯವರು ಕೊಟ್ಟ ಮಾತ್ರೆಗಳೇ ಕಾರಣ ಎಂದು ಮೃತ ಹನುಮಂತ ಪಾಟೀಲ್ ಅವರ ಪುತ್ರ ಪ್ರವೀಣ ಎಂಬವರು ಉಪನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.

ಮೇ 26ರಂದು ತನ್ನ ಮದುವೆ ಏರ್ಪಾಟಾಗಿತ್ತು. ತಂದೆಯವರು ಗುಣಮುಖರಾಗಿ ಬರುತ್ತಾರೆಂಬ ಸಂಭ್ರದಲ್ಲಿದ್ದೆವು. ಆದರೆ ವೆಲ್ನೆಸ್ ಫಾರ್ಮಸಿಯವರು ಕೊಟ್ಟ ಮಾತ್ರೆಗಳ ಅಡ್ಡ ಪರಿಣಾಮದಿಂದಾಗಿ ತಂದೆ ಹನುಮಂತಪ್ಪ ಸಾವಿಗೀಡಾಗಿದ್ದಾರೆ. ಮದುವೆ ಸಂಭ್ರದಲ್ಲಿದ್ದ ಆ ಮನೆಯಲ್ಲಿ ಈಗ ಸೂತಕದ ವಾತಾವರಣವುಂಟಾಗಿದೆ ಎಂದು ಪ್ರವೀಣ ಹಾಗೂ ಅವರ ಕುಟುಂಬದವರು ಆ ಮೆಡಿಕಲ್ ಶಾಪ್ ಗೆ ಹಿಡಿಶಾಪ ಹಾಕುತ್ತಿದ್ದಾರೆ.

ಮೆಡಿಕಲ್ ಶಾಪ್ ನವರು ತನ್ನ ತಂದೆಗೆ ವಿಷ ಉಣಿಸಿ ಕೊಂದಿದ್ದಾರೆ. ಪಾಪಿಗಳೇ,ನನ್ನ ಮದುವೆ ದಿನವೇ ನಮ್ಮ ಮನೆಯನ್ನು ಮಸಣದ ಮನೆ ಮಾಡಿದ್ರಿ ಅಂತಾ ಕಣ್ಣೀರು ಹಾಕುತ್ತಿದ್ದಾನೆ. ಇನ್ನೊಂದೆಡೆ ಇಲ್ಲಿ ಯಾರೂ ಔಷಧಿಗಳನ್ನು ತೆಗೆದುಕೊಳ್ಳಬೇಡಿ ಎಂದು ಹಿರಿಯರೊಬ್ಬರು ಕೂಗಿ ಕೂಗಿ ಹೇಳುತ್ತಿರೋ ದೃಶ್ಯ ಕರಳು ಹಿಂಡುತ್ತದೆ.

ಮುಂಡಗೋಡ ತಾಲೂಕು ಅಜ್ಜಿಹಳ್ಳಿ ಗ್ರಾಮದ ಹನುಮಂತ ಪಾಟೀಲ್ ಎಂಬವರಿಗೆ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಅವರನ್ನು ಧಾರವಾಡದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು,ಆದ್ರೆ ವೈದ್ಯರು ಚಿಕಿತ್ಸೆ ಕೊಟ್ಟು ಕೆಲವು ಮಾತ್ರೆಗಳನ್ನು ತೆಗೆದುಕೊಳ್ಳಿ ಅಂತ ಹೇಳಿದ್ದರು. ಹನುಮಂತ ಅವರ ಮಗ ಹುಬ್ಬಳ್ಳಿಯ ಕೋರ್ಟ್ ಸರ್ಕಲ್ ಬಳಿ ಇರುವ ವೆಲ್ ನೆಸ್ ಮೆಡಿಕಲ್ ಶಾಪ್ ದಲ್ಲಿ ಮಾತ್ರೆಗಳನ್ನು ತರಲು ಹೋದ.

ಆಗ ಫಾರ್ಮಸಿ ಸಿಬ್ಬಂದಿ, ವೈದ್ಯರು ಬರೆದು ಕೊಟ್ಟ ಮಾತ್ರೆಗಳು ನಮ್ಮಲ್ಲಿಲ್ಲ. ಆದ್ರೆ ಅದೇ ಕಾಂಬಿನೇಷನ್ ಇರುವ ಬೇರೆ ಕಂಪನಿಯ ಮಾತ್ರೆಗಳು ಇದ್ದಾವೆ ಅಂತಾ ಬೇರೆ ಕಂಪನಿ ಮಾತ್ರೆಗಳನ್ನು ಕೊಟ್ಟು ಎಡವಟ್ಟು ಮಾಡಿದ್ದಾರೆ. ಬೇರೆ ಕಂಪನಿ ಮಾತ್ರೆ ತೆಗೆದುಕೊಂಡ ಪರಿಣಾಮ ಹನುಮಂತ ಅವರ ಎಲ್ಲ ಅಂಗಾಗಳು ನಿಷ್ಕ್ರಿಯವಾಗಿ ಮೃತಪಟ್ಟಿದ್ದಾರೆ ಎಂದು ಮೃತ ಹನುಮಂತ ಪಾಟೀಲ್ ಪುತ್ರ ದೂರಿನಲ್ಲಿ ತಿಳಿಸಿದ್ದಾರೆ.

ಒಟ್ಟಿನಲ್ಲಿ ಮದುವೆ ಸಂಭ್ರಮದಲ್ಲಿ ಇರಬೇಕಾದ ಕುಟುಂಬ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣ ಮಾಡಿದ ವೆಲ್ ನೆಸ್ ಮೆಡಿಕಲ್ ಶಾಪ್ ವಿರುದ್ಧ ಪೊಲೀಸರು ಹಾಗೂ ಔಷಧಿ ನಿಯಂತ್ರಣ ಮಂಡಳಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬುದು ಸಾರ್ವ ಜನಿಕರ ಆಗ್ರಹವಾಗಿದೆ.

Edited By : Shivu K
Kshetra Samachara

Kshetra Samachara

29/05/2022 09:34 pm

Cinque Terre

76.79 K

Cinque Terre

20

ಸಂಬಂಧಿತ ಸುದ್ದಿ