ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಡಿಮಾನ್ಸ್ ನಲ್ಲಿ ನಡೆಯುತ್ತಿರುವುದಾದರೂ ಏನು?

ಧಾರವಾಡ: ಧಾರವಾಡದ ಡಿಮಾನ್ಸ್ ನಲ್ಲಿ ಚೆನ್ನೈ ಮೂಲದ ಮಹಿಳೆಯೊಬ್ಬರಿಗೆ ಅಲ್ಲಿನ ಕೆಲ ವೈದ್ಯರು 1 ವರ್ಷ 6 ತಿಂಗಳಿಂದ ಅನಗತ್ಯವಾದ ಚಿಕಿತ್ಸೆ ನೀಡುವ ಮೂಲಕ ಮಾನಸಿಕ ತೊಂದರೆ ನೀಡುತ್ತಿದ್ದಾರೆ ಎಂದು ವಕೀಲ ಎ.ಆರ್.ಪಾಟೀಲ ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚೆನ್ನೈ ಮೂಲದ ತಲಾಯಿ ಸೆಲ್ವಂ ಎಂಬ ಮಹಿಳೆ ಸುಂದರರಾಜ್ ಎಂಬ ವ್ಯಕ್ತಿಯೊಂದಿಗೆ ಹರ್ಬಲ್ ಬ್ಯೂಟಿ ಮಟೀರಿಯಲ್ ವ್ಯಾಪಾರ ವಹಿವಾಟು ನಡೆಸುತ್ತಿದ್ದರು. ಅದೇ ಕಾರಣಕ್ಕೆ ಹುಬ್ಬಳ್ಳಿಗೆ ಸೆಲ್ವಂ ಆತನೊಂದಿಗೆ ಬಂದಿದ್ದರು. ವ್ಯಾಪಾರ ದೊಡ್ಡ ಮಟ್ಟದಲ್ಲಿ ಬೆಳೆದಿದ್ದರಿಂದ ಸೆಲ್ವಂಗೆ ಮೋಸ ಮಾಡಲು ಸುಂದರರಾಜ್ ತಲಾಯಿ ಸೆಲ್ವಂ ಎಂಬ ಮಹಿಳೆಗೆ ಮೋಸ ಮಾಡಿ 2019ರಲ್ಲಿ ಧಾರವಾಡದ ಮಾನಸಿಕ ಆಸ್ಪತ್ರೆ ಸೇರಿಸಿ ಹೋಗಿದ್ದಾನೆ. ಸೆಲ್ವಂ ತಾನು ಆರೋಗ್ಯವಾಗಿ ಇದ್ದೇನೆ ಎಂದರೂ ಅಲ್ಲಿನ ವೈದ್ಯರು, ಆಕೆಯನ್ನು 1 ವರ್ಷ 6 ತಿಂಗಳವರೆಗೂ ಚಿಕಿತ್ಸೆ ನೆಪದಲ್ಲಿ ಹೊರಗೆ ಬಿಟ್ಟಿಲ್ಲ ಎಂದು ವಕೀಲರು ದೂರಿದರು.

ಈ ವಿಷಯ ತಿಳಿದ ಮಹಿಳಾ ವಕೀಲರು ಮತ್ತು ಆಸ್ರೆ ಎನ್‍ಜಿಓದವರು ಸೆಲ್ವಂ ಪರವಾಗಿ ಪ್ರಕರಣ ದಾಖಲಿಸಿ, ಆಕೆಯನ್ನು ಹೊರಗೆ ತರಲು ಪ್ರಯತ್ನಿಸಿದರು. ಸೆಲ್ವಂ ಬಿಡುಗಡೆಗೆ ಕೋರ್ಟ್ ಆದೇಶ ತಂದರೂ ಅವರನ್ನು ಬಿಡುಗಡೆ ಮಾಡಲು ಅಲ್ಲಿನ ವೈದ್ಯರು ನಿರಾಕರಿಸಲು ಮುಂದಾರು. ಈ ಮೊದಲು ಮಹಿಳೆಯನ್ನು ಭೇಟಿಯಾಗಲು ಹೋದರೆ ಅದಕ್ಕೆ ಅವಕಾಶ ಕೊಡಲಿಲ್ಲ. ಹೀಗಾಗಿ ಅಲ್ಲಿನ ವೈದ್ಯರ ವರ್ತನೆಯನ್ನು ಗಮನಿಸಿದರೆ ಈ ಪ್ರಕರಣದ ಕುರಿತು ಸಮಗ್ರ ತನಿಖೆ ಆಗಬೇಕು ಎಂದು ಪಾಟೀಲ ಒತ್ತಾಯಿಸಿದರು.

ಸಂತ್ರಸ್ತೆ ತಲಾಯಿ ಸೆಲ್ವಂ ಮಾತನಾಡಿ, ಡಿಮಾನ್ಸ್ ಆಸ್ಪತ್ರೆಯಲ್ಲಿನ ಡಾ. ರಾಘವೇಂದ್ರ ನಾಯಕ, ಡಾ. ರಂಗನಾಥ ಕುಲಕರ್ಣಿ ಹಾಗೂ ಮಹೇಶ ದೇಸಾಯಿ ಅವರು ಸರಿಯಿದ್ದ ಜನರಿಗೆ ಹುಚ್ಚರ ಪಟ್ಟ ಕಟ್ಟುವಲ್ಲಿ ನಿರತರಾಗಿದ್ದಾರೆ. ಆಸ್ಪತ್ರೆಯಲ್ಲಿ ಇನ್ನೂ ಕೆಲವರು ಆರೋಗ್ಯವಾಗಿದ್ದಾರೆ. ಆದರೂ ಅವರನ್ನು ಅಲ್ಲೇ ಇಡಲಾಗಿದೆ ಎಂದು ತಮ್ಮ ಅಳನ್ನು ತೋಡಿಕೊಂಡರು.

ಎನ್‍ಜಿಓದ ರವಿ ದೇಶಪಾಂಡೆ, ಮಹಿಳಾ ವಕೀಲೆ ಹಿರೇಮಠ, ಇತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Edited By : Nirmala Aralikatti
Kshetra Samachara

Kshetra Samachara

13/02/2021 06:16 pm

Cinque Terre

72.27 K

Cinque Terre

1

ಸಂಬಂಧಿತ ಸುದ್ದಿ