ಡೆಂಘಿ, ಮಲೇರಿಯಾ, ಚಿಕೂನ್ ಗುನ್ಯಾ ಮತ್ತಿತರ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕುರಿತು ಜನಜಾಗೃತಿ ಮೂಡಿಸಲು ಧಾರವಾಡದ ನಾದ ಝೇಂಕಾರ ಸಾಂಸ್ಕೃತಿಕ ಸಂಸ್ಥೆ ನಿರ್ಮಿಸಿರುವ "ಗುಂಯ್ ಗುಂಯ್ ದಾಳಿ" ಕಿರುಚಿತ್ರವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಬಿಡುಗಡೆ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿರುಚಿತ್ರ ಬಿಡುಗಡೆ ಮಾಡಿದ ಜಿಲ್ಲಾಧಿಕಾರಿಗಳು, ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ನೈರ್ಮಲ್ಯ ನಿರ್ವಹಣೆ ಹಾಗೂ ಶುಚಿಯಾದ ಆಹಾರ, ನೀರು ಸೇವನೆ ಅಗತ್ಯ. ಸಾರ್ವಜನಿಕರ ಜಾಗೃತಿಗೆ ನಾದಝೇಂಕಾರ ಸಂಸ್ಥೆ ಕಲಾವಿದರು ಸ್ವಯಂಪ್ರೇರಿತರಾಗಿ ಕಿರುಚಿತ್ರ ನಿರ್ಮಿಸಿರುವುದು ಪ್ರಶಂಸನೀಯ ಎಂದರು.
ಯಮನಪ್ಪ ಜಾಲಗಾರ ಕಿರು ಚಿತ್ರದ ಕಥೆ, ಚಿತ್ರಕಥೆ ರಚಿಸಿ, ಸಂಭಾಷಣೆ, ನಿರ್ದೇಶನ ಮಾಡಿದ್ದಾರೆ. ಫಕ್ಕೀರಪ್ಪ ಮಾದನಭಾವಿ ಸಂಗೀತ ನಿರ್ದೇಶನ ಮಾಡಿದ್ದಾರೆ.
ಜಗದೀಶ ಮೂಕಿ ಆಕರ್ಷಕವಾಗಿ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಹುಬ್ಬಳ್ಳಿಯ ಅವೆಕ್ ರೆಕಾರ್ಡಿಂಗ್ ಸ್ಟುಡಿಯೋದಲ್ಲಿ ಹಾಡುಗಳು ಮತ್ತು ಧ್ವನಿ ಮುದ್ರಣವಾಗಿವೆ.
ಕಿರುಚಿತ್ರದಲ್ಲಿ ಜಯಶ್ರೀ ಜಾತಿಕರ್ತ, ಭಾಸ್ಕರ್ ಹಿತ್ತಲಮನಿ, ಭಾವನಾ, ಯಶೋಧಾ ತೊಲಗಿ, ತುಂಗಾ, ವಿದ್ಯಾ ಹಿಪ್ಪರಗಿ, ವಿನಯ್, ನೇತ್ರಾ ಮಡ್ಲಿ, ಹನುಮಂತ ಆಚಾರ್ಯ, ದೊಡ್ಡಪ್ಪ ಹೊಳ್ಳೆಪ್ಪನವರ್, ರಮೇಶ್ ಕುಂಬಾರ್, ಕಿನ್ನರಿ, ಅಮೃತಾ ಸೇರಿದಂತೆ ಹುಬ್ಬಳ್ಳಿ ತಾಲ್ಲೂಕಿನ ಸುಳ್ಳ ಗ್ರಾಮದ ಜನರು ಈ ಕಿರುಚಿತ್ರದಲ್ಲಿ ಅಭಿನಯುಸಿದ್ದಾರೆ.
Kshetra Samachara
09/07/2022 01:16 pm