ನವಲಗುಂದ : ತಾಲ್ಲೂಕಿನಲ್ಲಿ ದಿನೇ ದಿನೇ ಏರುತ್ತಿರುವ ಕೋವಿಡ್ ಮಹಾಮಾರಿಗೆ ಹಲವು ಗ್ರಾಮಗಳಲ್ಲಿನ ಶಾಲೆಗಳನ್ನು ಸೀಲ್ ಡೌನ್ ಮಾಡಲಾಗುತ್ತಿದ್ದು, ಕಠಿಣ ಮಾರ್ಗಸೂಚಿಗಳನ್ನು ಪಾಲನೆ ಮಾಡಲಾಗುತ್ತಿದೆ.
ಹೌದು ಅಮರಗೋಳ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 17 ವಿದ್ಯಾರ್ಥಿಗಳಿಗೆ, ಚಿಲಕವಾಡದ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ 17 ವಿದ್ಯಾರ್ಥಿಗಳಿಗೆ, ಇಬ್ಬರು ಶಿಕ್ಷಕರಿಗೆ ಮತ್ತು ಊಟದ ಸಿಬ್ಬಂದಿಗೆ, ಅಳಗವಾಡಿ ಗ್ರಾಮದ ಮಲ್ಲಮ್ಮ ವೆಂಕರಡ್ಡಿ ನಡುವಿನಮನಿ ಪ್ರೌಢ ಶಾಲೆಯಲ್ಲಿ 23 ವಿದ್ಯಾರ್ಥಿಗಳಿಗೆ ಮತ್ತು 3 ಶಿಕ್ಷಕರಿಗೆ ಮಹಾಮಾರಿ ಕೊರೋನಾ ವಕ್ಕರಿಸಿದೆ.
Kshetra Samachara
28/01/2022 10:01 pm