ಕುಂದಗೋಳ : ಕೊರೊನಾ ವೈರಸ್ ಮೂರನೇ ಅಲೆ ಮುಂಜಾಗ್ರತೆಗೆ ಜನ ಅತಿ ಹೆಚ್ಚಾಗಿ ವಾಲಿದ್ದು, ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ಬೂಸ್ಟರ್ ಡೋಸ್ ಲಿಸಿಕೆ ಕೇಳುವವರ ಸಂಖ್ಯೆ ಏರಿಕೆ ಕಾಣುತ್ತಿದೆ.
ಈಗಾಗಲೇ ಕುಂದಗೋಳ ತಾಲೂಕ ಆಸ್ಪತ್ರೆಯಲ್ಲಿ ಓಪಿಡಿ ಕೌಂಟರ್'ಗೆ ಬಂದವರಿಗೆ ಹಾಗೂ ರೋಗಿಗಳಿಗೆ ಕೋವಿಡ್ ತಪಾಸಣೆ ಕಡ್ಡಾಯ ಮಾಡಿದ್ದು, ಇತ್ತ ಜನ ಬೂಸ್ಟರ್ ಡೋಸ್ ಕೊಡಿ ಎಂದು ತಮ್ಮ ವ್ಯಾಕ್ಸಿನ್ ಅವಧಿಗೂ ಮೊದಲೇ ಆಸ್ಪತ್ರೆ ಕಡೆ ಜನ ಹೆಜ್ಜೆ ಹಾಕುತ್ತಿದ್ದು, ಅಲ್ಲಿ ಕೋವ್ಯಾಕ್ಸಿನ್ ಲಸಿಕೆ ಅಭಾವ ಕಂಡು ಬಂದಿದೆ.
ಈಗಾಗಲೇ ಕೋಲಿಶಿಲ್ಡ್ ಲಸಿಕೆ ಸೆಕೆಂಡ್ ಡೋಸ್ ಪಡೆದು ಒಂಭತ್ತು ತಿಂಗಳು ಕಳೆದವರಿಗೆ ಬೂಸ್ಟರ್ ಕೋವಿಶಿಲ್ಡ್ ಲಸಿಕೆ ನೀಡಲಾಗುತ್ತಿದೆ. ಆದರೆ ಕೋವ್ಯಾಕ್ಸಿನ್ ಸೆಕೆಂಡ್ ಡೋಸ್ ಪಡೆದು ಒಂಭತ್ತು ತಿಂಗಳು ಕಳೆದವರಿಗೆ ಬೂಸ್ಟರ್ ಕೋವ್ಯಾಕ್ಸಿನ್ ಲಸಿಕೆ ಸ್ಟಾಕ್ ಇಲ್ಲದ ಪರಿಣಾಮ ವೈದ್ಯಕೀಯ ಸಿಬ್ಬಂದಿಗಳು ಸಂಪರ್ಕ್ ಸಂಖ್ಯೆ ಪಡೆದು ಕೋವ್ಯಾಕ್ಸಿನ್ ಬಂದ ಬಳಿಕ ನೀಡುತ್ತೇವೆ ಎನ್ನುತ್ತಿದ್ದಾರೆ.
ಒಟ್ಟಾರೆ ಕೊರೊನಾ ಮೂರನೇ ಅಲೆ ಬೆಚ್ಚಿದ ಜನ ಈಗ ಬೂಸ್ಟರ್ ಡೋಸ್ ವ್ಯಾಕ್ಸಿನ್ ಕೇಳುತ್ತಿದ್ದಾರೆ.
Kshetra Samachara
17/01/2022 01:24 pm