ಧಾರವಾಡ: ರಾಜ್ಯದಲ್ಲಿ ಕೊರೊನಾ ಕೇಸ್ ಹೆಚ್ಚಳದ ಜೊತೆಗೆ ಓಮಿಕ್ರಾನ್ ಅಬ್ಬರವೂ ಶುರುವಾಗಿದ್ದು, ಈ ಹಿನ್ನೆಲೆಯಲ್ಲಿ ಜನರು ಮತ್ತು ವಕೀಲರು ಸಾಕಷ್ಟು ಜಾಗೃತೆ ವಹಿಸಬೇಕಿದೆ ಎಂದು ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ರಿತು ರಾಜ್ ಆವಸ್ಥಿ ಹೇಳಿದರು.
ಧಾರವಾಡದ ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರು, ವಕೀಲರನ್ನುದ್ದೇಶಿಸಿ ಮಾತನಾಡಿದರು.
ನಾವು ಈಗ ಮೂರನೇ ಅಲೆಯ ಹೊಸ್ತಿಲಲ್ಲಿದ್ದೇವೆ. ಓಮಿಕ್ರಾನ್ ವೇಗವಾಗಿ ಹರಡುತ್ತಿದೆ. ನಿನ್ನೆ ಒಂದೇ ದಿನ ಬೆಂಗಳೂರು ನಗರದಲ್ಲಿ 4000ಕ್ಕೂ ಹೆಚ್ಚು ಕೇಸ್‌ಗಳು ಬಂದಿವೆ. ಹೀಗಾಗಿ ಸೋಂಕು ತಗುಲದಂತೆ ಜಾಗೃತೆ ವಹಿಸಬೇಕಿದೆ. ಎಸ್ಓಪಿ ನಿಯಮಗಳನ್ನು ಪಾಲಿಸಬೇಕು. ನಮ್ಮನ್ನು ನಾವು ಸೋಂಕಿನಿಂದ ರಕ್ಷಿಸಿಕೊಳ್ಳಬೇಕು. ಇದನ್ನು ಹೇಳುವುದಕ್ಕಾಗಿಯೇ ನಾನು ಇಲ್ಲಿಗೆ ಬಂದಿದ್ದೇನೆ. ನಿಮ್ಮನ್ನು ನೀವು ರಕ್ಷಿಸಿಕೊಳ್ಳಿ ಎಂದು ಕ ವಕೀಲರಿಗೆ ಮುಖ್ಯ ನ್ಯಾಯಮೂರ್ತಿಗಳು ಸಲಹೆ ನೀಡಿದರು.
Kshetra Samachara
06/01/2022 08:54 pm