ವರದಿ: ಬಿ. ನಂದೀಶ
ಅಣ್ಣಿಗೇರಿ; ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಮಕ್ಕಳ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಶಾಲಾ ಮಕ್ಕಳಿಗೆ ನೀಡಲಾಗುತ್ತಿರುವ ಲಸಿಕೆ ಕಾರ್ಯಕ್ರಮವನ್ನು ಪಟ್ಟಣದ ಶ್ರೀ ಅಮೃತೇಶ್ವರ ಶಾಲೆಯಲ್ಲಿ ಚಾಲನೆ ನೀಡಲಾಯಿತು.
ಶಾಲೆಯ ಪ್ರಾಂಶುಪಾಲರಾದ ಜಿಂಜಿನವಾಡಿ, ತಾಲೂಕಿನ ದಂಡಾಧಿಕಾರಿ ಮಂಜುನಾಥ ಅಮಾಸೆ, ಡಾಕ್ಟರ್ ಕೃಷ್ಣ ಜಗ್ಗಲ್ ಸೇರಿ ಸಸಿಗೆ ನೀರುಣಿಸುವ ಮೂಲಕ ಲಸಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇನ್ನು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ಬಂದಂತ ಅಧಿಕಾರಿಗಳಾದ BHO ಶೋಭಾ ಕುಲಕರ್ಣಿ, HI ಎಂ.ಎ.ತಸಿಲ್ದಾರ್ ಸೇರಿದಂತೆ ಸಿಬ್ಬಂದಿಗಳು ಲಸಿಕೆ ನೀಡಲು ಮುಂದಾದರು.
ಈ ವೇಳೆ ಮಕ್ಕಳು ಅತಿ ಉತ್ಸಾಹದಿಂದ ಆಧಾರ್ ಕಾರ್ಡ್ ಹಿಡಿದು ಸರದಿ ಸಾಲಿನಲ್ಲಿ ನಿಂತು ಲಸಿಕೆ ತೆಗೆದುಕೊಂಡರು. ಇಂದು ಒಟ್ಟು 427 ವಿದ್ಯಾರ್ಥಿಗಳಿಗೆ ಲಸಿಕೆಯನ್ನು ನೀಡಲಾಯಿತು.ಕೊರೊನಾ ವೈರಸ್‌ನ ರೂಪಾಂತರಿ ಒಮಿಕ್ರಾನ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರಕಾರ ಈ ಕಾರ್ಯಕ್ಕೆ ಮುಂದಾಗಿರುತ್ತದೆ.
Kshetra Samachara
03/01/2022 11:00 pm