ಹುಬ್ಬಳ್ಳಿ: ಹುಬ್ಬಳ್ಳಿ-ಮಹಾನಗರ ಪಾಲಿಕೆ ಅಧಿಕಾರಿಗಳು ಇಂದು ಜನತಾ ಬಜಾರ್ ಹತ್ತಿರದ ಸಿಟಿ ಕ್ಲಿನಿಕ್ ಎದುರಿನ ಬಿರಿಯಾನಿ ಸ್ಕ್ವೇರ್ ಹೋಟೆಲ್ ತಪಾಸಣೆ ನಡೆಸಿ 2 ಸಾವಿರ ರೂ. ದಂಡ ವಿಧಿಸಿದ್ದಾರೆ.
ಗ್ರಾಹಕರ ದೂರಿನ ಮೇಲೆ ಹೋಟೆಲ್ ತಪಾಸಣೆ ನಡೆಸಿದ ಅಧಿಕಾರಿಗಳು ಸ್ವಚ್ಛತೆ, ಗುಣಮಟ್ಟ ಪಾಲಿಸದೆ ಇರುವ ಕಾರಣ ದಂಡ ವಿಧಿಸಿದ್ದಾರೆ. ಮುಂದಿನ ದಿನಗಳಲ್ಲಿ ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆ ಕಾಪಾಡದಿದ್ದರೆ ಹೋಟೆಲ್ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ತಪಾಸಣೆ ವೇಳೆ ಹಿರಿಯ ಆರೋಗ್ಯ ನಿರೀಕ್ಷಕ ಯಲ್ಲಪ್ಪ ಯರಗಂಟಿ ಸೇರಿದಂತೆ ಇತರೆ ಸಿಬ್ಬಂದಿ ಉಪಸ್ಥಿತರಿದ್ದರು.
Kshetra Samachara
03/10/2020 07:37 pm