ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ - ಲಾಕ್ ಡೌನ್ ತೆರವಿನ ನಂತರ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆಗೆ ಹೆಚ್ಚಿದ ಒಲವು

ಹುಬ್ಬಳ್ಳಿ - ಜನಸಂಖ್ಯಾ ನಿಯಂತ್ರಣದಲ್ಲಿ ಕುಟುಂಬ ಯೋಜನೆ ಮಹತ್ವದ ಪಾತ್ರ ವಹಿಸುತ್ತದೆ. ‌ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು‌‌ ಕುಟುಂಬ ಯೋಜನೆ ಜಾರಿ ತಂದಿರುವದರಿಂದ ತಕ್ಕಮಟ್ಟಿಗೆ ಜನಸಂಖ್ಯಾ ನಿಯಂತ್ರಣಕ್ಕೆ ಬಂದಿದೆ. ಆದ್ರೆ ಕೊರೊನಾ ಎಫೆಕ್ಟ್ ಕುಟುಂಬ ಯೋಜನೆಯ ಮೇಲೆ ಹೆಚ್ಚಿನ ಪ್ರಭಾವ ಬೀರಿದೆ....

ಕೊರೊನಾ ಕಾರಣದಿಂದ ಸಂತಾನಹರಣ ಶಸ್ತ್ರ ಚಿಕಿತ್ಸೆ ಕುಂಟಿತಗೊಂಡಿತ್ತು.‌ ಶಸ್ತ್ರ ಚಿಕಿತ್ಸೆ ಮಾಡಬಾರದು ಎಂದು ಸರ್ಕಾರ ಆದೇಶ ಹೊರಡಿಸಿದ್ದರಿಂದ ಸ್ಥಗಿತಗೊಂಡಿತ್ತು. ಆದ್ರೆ ಈಗ ಮತ್ತೆ ಸಂತಾನ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗುತ್ತಿದ್ದು, ಮೊದಲಿಗಿಂತಲೂ ‌ಹೆಚ್ಚು ಜನರು ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದಾರೆ....

ಕೊರೊನಾ ಪೂರ್ವದಲ್ಲಿ ಪ್ರತಿ ತಿಂಗಳ ಬ್ಯಾಚಿನಲ್ಲಿ, 150 ರಷ್ಟು ಮಹಿಳೆಯರು ಶಸ್ತ್ರ ಚಿಕಿತ್ಸೆಗೆ ಒಳಗಾಗುತ್ತಿದ್ದರು. ಆದ್ರೆ ಈಗ ಅದರ ಪ್ರಮಾಣ ಹೆಚ್ಚಾಗಿದೆ. ಕೊರೊನಾ ಭೀತಿ‌ ಕಡಿಮೆಯಾದ್ದರಿಂದ ಅತೀ ಹೆಚ್ಚು ಜನರು ಚಿಕಿತ್ಸೆಯತ್ತ ಒಲವು ತೋರುತ್ತಿದ್ದಾರೆ. ಮಹಾನಗರ ಪಾಲಿಕೆಯ ಚಿಟಗುಪ್ಪಿ ಆಸ್ಪತ್ರೆ ಒಂದರಲ್ಲಿಯೇ ಪ್ರತಿ ತಿಂಗಳು 150 ಕ್ಕೂ ಹೆಚ್ಚು ಮಹಿಳೆಯರು ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ.......!

Edited By : Manjunath H D
Kshetra Samachara

Kshetra Samachara

23/11/2020 02:48 pm

Cinque Terre

45.51 K

Cinque Terre

3

ಸಂಬಂಧಿತ ಸುದ್ದಿ