ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಸ್ವಸ್ಥರಾದ ಅವಳಿನಗರ ಪೊಲೀಸ್ ಆಯುಕ್ತ: ಆಸ್ಪತ್ರೆಗೆ ದಾಖಲು

ಹುಬ್ಬಳ್ಳಿ- ಅವಳಿನಗರ ಪೊಲೀಸ್ ಕಮೀಷನರ್ ಲಾಬೂರಾಮ್ ಅವರನ್ನ ಧಾರವಾಡದ ಎಸ್ ಡಿ ಎಂ ಆಸ್ಪತ್ರೆಯಿಂದ ಮಣಿಪಾಲ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದ್ದು ಆರೋಗ್ಯದಲ್ಲಿ ಸ್ಥಿರತೆಯಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ...

ಕಳೆದ ಎರಡು ದಿನದ ಹಿಂದಿನಿಂದಲೂ ಎಸ್ ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆರೋಗ್ಯದಲ್ಲಿ ತೀವ್ರ ಏರುಪೇರಾಗಿದ್ದರಿಂದ ಕುಟುಂಬದ ಸದಸ್ಯರು ರಾತ್ರಿಯೇ ಬೇರೆ ಆಸ್ಪತ್ರೆಗೆ ರವಾನೆ ಮಾಡಿರುವುದು ಗೊತ್ತಾಗಿದೆ.

ಅವಳಿನಗರದ ಪೊಲೀಸ್ ಆಯುಕ್ತರಾಗಿ ಇತ್ತೀಚೆಗೆ ಅಧಿಕಾರ ವಹಿಸಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸುತ್ತಿದ್ದ ಲಾಬುರಾಮ್, ಖಡಕ್ ಅಧಿಕಾರಿಯಂದೇ ಹೆಸರು ಗಳಿಸಿದ್ದಾರೆ. ಅವರು ಬಂದ ನಂತರ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಲ್ಲಿ ಸಮನ್ವಯತೆ ಕಂಡು ಬಂದಿದ್ದು, ಕ್ರೈಂ ಪ್ರಕರಣಗಳು ಕೂಡಾ ಕಡಿಮೆಯಾಗಿದ್ದವು.

ಕೆಲವರು ಅವರಿಗೆ ಬಿಳಿ ರಕ್ತದ ಕಣಗಳು ಕಡಿಮೆಯಾಗಿದ್ದವು ಎಂದೂ, ಇನ್ನೂ ಕೆಲವರು ಗಂಟಲು ನೋವು ಹೆಚ್ಚಾಗಿತ್ತು ಎಂದು ಹೇಳುತ್ತಿದ್ದಾರೆ ನಿಖರವಾಗಿ ಅನಾರೋಗ್ಯಕ್ಕೆ ಕಾರಣ ಏನೆಂದು ತಿಳಿದುಬಂದಿಲ್ಲ.

Edited By : Nagaraj Tulugeri
Kshetra Samachara

Kshetra Samachara

12/11/2020 12:04 pm

Cinque Terre

36.34 K

Cinque Terre

18

ಸಂಬಂಧಿತ ಸುದ್ದಿ