ಹುಬ್ಬಳ್ಳಿ- ನಗರದಲ್ಲಿ ಫಾಸ್ಟ್ ಫುಡ್ ಟೇಸ್ಟಿಂಗ್ ಪೌಡರ್ ಹಾವಳಿಯನ್ನು ತಡೆಗಟ್ಟಲು, ಸಂಸ್ಕಾರ ಫೌಂಡೆಶನ ನಿರಂತರವಾಗಿ ಶ್ರಮ ವಹಿಸುತ್ತಿದೆ.
ಹೌದು,,,, ಇತ್ತಿಚಿನ ದಿನಗಳಲ್ಲಿ ಫಾಸ್ಟ್ ಫುಡ್ ಹಾವಳಿ ಹೆಚ್ಚಾಗಿದ್ದು, ನಿರಂತರವಾಗಿ ಹು-ಧಾ ಮಹಾನಗರ ಪಾಲಿಕೆ ಆರೋಗ್ಯ ಅಧಿಕಾರಿಗಳು ತಡೆಗಟ್ಟಲು ಹಲವಾರು ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಅದೇ ರೀತಿಯಾಗಿ ಸಂಸ್ಕಾರ ಫೌಂಡೇಶನ್ ಸದಸ್ಯರು ನಗರದಲ್ಲಿರುವ ಬೀದಿ ಬದಿ ಹೊಟೇಲ್ ಸೇರಿದಂತೆ ಐಶಾರಾಮಿ ಹೋಟೆಲ್ ಗೆ ಭೇಟಿ ನೀಡಿ, ಆಹಾರದ ಗುಣಮಟ್ಟ ಪರಿಶೀಲನೆ ನಡೆಸುವ ಮೂಲಕ, ಆರೋಗ್ಯದ ಸಾರ್ವಜನಿಕರಿಗೆ ಜಾಗೃತಿ ಮೂಡಿಸುತ್ತಿದ್ದಾರೆ. ಫ್ರೈಡ್ ರೈಸ್, ನೂಡಲ್ಸ್, ಗೋಬಿ ಇನ್ನಿತ್ತರ ಫಾಸ್ಟ್ ಫುಡ್ ನಲ್ಲಿ ಗ್ರಾಹಕರ ಸೆಳೆಯಲು, ಟೇಸ್ಟಿಂಗ್ ಪೌಡರ್ ಬಳಕೆಯಾಗುತ್ತಿದೆ. ಟೇಸ್ಟಿಂಗ್ ಪೌಡರ್ ಸೇವನೆ ಮಾಡುವುದರಿಂದ ಕ್ಯಾನ್ಸರ್, ಕಿಡ್ನಿ, ಹೃದಯಾಘಾತ ಹೀಗೆ ಹಲವಾರು ರೋಗಿಗಳು ಬರುವ ಸಂಭವವಿದೆ. ಆದ್ದರಿಂದ ಸಾರ್ವಜನಿಕರು ಫಾಸ್ಟ್ ಫುಡ್ ಸೇವನೆ ಮಾಡುವುದನ್ನು ಬಿಡಬೇಕೆಂದು ಜಾಗೃತಿ ಮೂಡಿಸುವುದರ ಜೊತೆಗೆ ಅಂಗಡಿ ಮಾಲೀಕರಿಗೆ ಎಚ್ಚರಿಕೆ ನೀಡುತ್ತಿದ್ದಾರೆ.
Kshetra Samachara
07/11/2020 10:53 am