ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ: ವಿವಿಧ ಪ್ರಮಾಣ ಪತ್ರಗಳ ವಿತರಣಾ ಸೇವೆಯಲ್ಲಿ ಗಣನೀಯ ಸಾಧನೆ: ಧಾರವಾಡ ಜಿಲ್ಲೆಗೆ ತೃತೀಯ ಸ್ಥಾನ

ಧಾರವಾಡ: ಅಟಲ್‌ ಜೀ ಜನಸ್ನೇಹಿ ಕೇಂದ್ರದ ಮೂಲಕ ಜಿಲ್ಲೆ ಮತ್ತು ರಾಜ್ಯದ ಸಾರ್ವಜನಿಕರಿಗೆ ವಿವಿಧ ಪ್ರಮಾಣ ಪತ್ರಗಳ ಸೇವೆಯನ್ನು ನೀಡುವಲ್ಲಿ ಧಾರವಾಡ ಜಿಲ್ಲೆಯ ನಾಡ ಕಚೇರಿಗಳು ಉತ್ತಮ ಸಾಧನೆ ಮಾಡಿದ್ದು, ಪ್ರಸಕ್ತ ಮಾಹೆಯಲ್ಲಿ ಧಾರವಾಡ ಜಿಲ್ಲೆ ರಾಜ್ಯಕ್ಕೆ ತೃತೀಯ ಸ್ಥಾನ ಪಡೆದಿದೆ. ಈ ಸಾಧನೆಗೆ ಮಾರ್ಗದರ್ಶನ ನೀಡಿ, ಶ್ರಮಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರನ್ನು ರಾಜ್ಯ ಅಟಲ್ ಜನಸ್ನೇಹಿ ನಿರ್ದೇಶನಾಲಯ ಅಭಿನಂದಿಸಿ, ಅಭಿನಂದನಾ ಪತ್ರ ನೀಡಿದೆ.

ಧಾರವಾಡ ಜಿಲ್ಲೆಯಲ್ಲಿ ಸೆಪ್ಟೆಂಬರ್-2022 ಮಾಹೆಯಲ್ಲಿ ಸ್ವೀಕರಿಸಲಾಗಿರುವ 27337 ಅರ್ಜಿಗಳನ್ನು ನಿಗದಿತ ಅವಧಿಗಿಂತ ಮೊದಲೇ ಶೇ.100 ರಷ್ಟು ವಿಲೇವಾರಿ ಮಾಡಿ 10 ಸಿಗ್ಮಾ ಮೌಲ್ಯವನ್ನು ಪಡೆಯಲಾಗಿದೆ. ವಿಲೇವಾರಿ ಸೂಚ್ಯಂಕದ (Disposal Index) ಪ್ರಕಾರ ಧಾರವಾಡ ಜಿಲ್ಲೆಯಲ್ಲಿ 10.1 ಪಟ್ಟು ನಿಗದಿತ ಅವಧಿಗಿಂತ ಅರ್ಜಿಗಳನ್ನು ಶೀಘ್ರವಾಗಿ ವಿಲೇವಾರಿ ಮಾಡಿ, ಸೆಪ್ಟೆಂಬರ್-2022 ನೇ ಮಾಹೆಯಲ್ಲಿ ಧಾರವಾಡ ಜಿಲ್ಲೆಯು ರಾಜ್ಯ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿರುವುದು ಶ್ಲಾಘನೀಯ.

ಧಾರವಾಡ ಜಿಲ್ಲೆಯಲ್ಲಿನ ಈ ಕಾರ್ಯಸಾಧನೆಗೆ ಜಿಲ್ಲಾಧಿಕಾರಿಗಳು ಹಾಗೂ ನಾಡಕಚೇರಿ, ಅಟಲ್‌ಜೀ ಜನಸ್ನೇಹಿ ಕೇಂದ್ರದ ಅಧಿಕಾರಿ, ಸಿಬ್ಬಂದಿ ಸಹಕಾರ, ಕಾರ್ಯತತ್ಪರತೆ ಕಾರಣವಾಗಿದೆ. ಆದ್ದರಿಂದ, ಈ ಸಾಧನೆಯನ್ನು ಗುರುತಿಸಿ, ಅಟಲ್‌ ಜೀ ಜನಸ್ನೇಹಿ ನಿರ್ದೇಶನಾಲಯದ ಪರವಾಗಿ ಅಭಿನಂದನೆಯನ್ನು ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿಯೂ ಸಹ ಧಾರವಾಡ ಜಿಲ್ಲೆಯಿಂದ ಇದೇ ರೀತಿಯ ಸಹಕಾರ ಹಾಗೂ ಕಾರ್ಯ ಕ್ಷಮತೆಯನ್ನು ನಿರೀಕ್ಷಿಸುತ್ತೇನೆ ಎಂದು ಆಶಿಸಿ, ಅಟಲ್‌ಜಿ ಜನಸ್ನೇಹಿ ನಿರ್ದೇಶನಾಲಯದ ನಿರ್ದೇಶಕಿ ಗಂಗೂಬಾಯಿ ರಮೇಶ ಮಾನಕರ ಹರ್ಷ ವ್ಯಕ್ತಪಡಿಸಿದ್ದಾರೆ.

Edited By : Nagaraj Tulugeri
Kshetra Samachara

Kshetra Samachara

10/10/2022 09:45 pm

Cinque Terre

15.92 K

Cinque Terre

1

ಸಂಬಂಧಿತ ಸುದ್ದಿ