ನವಲಗುಂದ : ಪಾರ್ಶ್ವವಾಯು ಪೀಡಿತ ನವಲಗುಂದ ನಗರದ ನಿವಾಸಿ ಮೇಲಗಿರಿಯಪ್ಪ ಹುಚ್ಚಪ್ಪ ಭಜಂತ್ರಿ ಎಂಬುವವರು ಪಿಂಚಣಿಗಾಗಿ ತಹಶೀಲ್ದಾರ ಕಚೇರಿಗೆ ಭೇಟಿ ನೀಡಿದ್ದರು. ಅದಕ್ಕೆ ಕೂಡಲೇ ಸ್ಪಂದಿಸಿದ ತಹಶೀಲ್ದಾರ ಅನಿಲ ಬಡಿಗೇರ ಅವರು ಕೇವಲ 24 ಗಂಟೆಯ ಒಳಗಾಗಿ ಮಂಜೂರು ಮಾಡಿ ಅವರ ಮನೆಗೆ ಸಿಬ್ಬಂದಿಯೊಂದಿಗೆ ಖುದ್ದಾಗಿ ತೆರಳಿ ಫಲಾನುಭವಿಗೆ ಆದೇಶ ಪತ್ರವನ್ನು ವಿತರಿಸಿದರು.
ಹೌದು ಮೇಲಗಿರಿಯಪ್ಪ ಹುಚ್ಚಪ್ಪ ಭಜಂತ್ರಿ ಎಂಬ ಪಾರ್ಶ್ವವಾಯು ಪೀಡಿತ ವ್ಯಕ್ತಿ ಪಿಂಚಣಿಗಾಗಿ ತಹಶೀಲ್ದಾರ ಕಚೇರಿಗೆ ಜುಲೈ 1 ರಂದು ಭೇಟಿ ನೀಡಿದ್ದರು. ಮನವಿಗೆ ಸ್ಪಂದಿಸಿದ ತಹಶೀಲ್ದಾರ ಅನಿಲ ಬಡಿಗೇರ ಅವರು ಜುಲೈ 2 ರಂದು ಸಿಬ್ಬಂದಿಯೊಂದಿಗೆ ಖುದ್ದಾಗಿ ಮನೆಗೆ ತೆರಳಿ ಆದೇಶ ಪತ್ರವನ್ನು ವಿತರಿಸಿದರು.
ಈ ಸಂಧರ್ಭದಲ್ಲಿ ತಹಶೀಲ್ದಾರ ಗ್ರೇಡ್-2 ಎಂ.ಜೆ ಹೊಕ್ರಾಣಿ, ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿ ಗಣೇಶ ಚಳಕೇರಿ ಹಾಗೂ ರಾಘವೇಂದ್ರ ಗೋನಾಳ ಗ್ರಾಮಲೆಕ್ಕಾಧಿಕಾರಿ ನವಲಗುಂದ ಉಪಸ್ಥಿತರಿದ್ದರು.
Kshetra Samachara
03/07/2022 09:39 am