ಧಾರವಾಡ: ನಿನ್ನೆ ಹುಬ್ಬಳ್ಳಿಯ ತಹಶೀಲ್ದಾರ ಕಚೇರಿಯಲ್ಲಿ ಸರ್ಕಾರಿ ನೌಕರರ ಕೆಲಸಕ್ಕೆ ಕೆಆರ್‌ಎಸ್ ಪಕ್ಷದವರು ಅಡ್ಡಿಪಡಸಿದ್ದಾರೆ ಎಂದು ಆರೋಪಿಸಿ, ಧಾರವಾಡ ಜಿಲ್ಲೆಯ ಸರ್ಕಾರಿ ನೌಕರರು ಧಾರವಾಡ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಸರ್ಕಾರಿ ಕಚೇರಿಯ ಅವಧಿಯ ಸಮಯದಲ್ಲಿ ಕೆಆರ್‌ಎಸ್ ಪಕ್ಷದರು ಬಂದು ವಿನಾಕಾರಣ ಕೆಲಸಕ್ಕೆ ಅಡ್ಡಿಪಡಿಸುತ್ತಿದ್ದಾರೆ. ಹೀಗಾಗಿ ಅವರ ಮೇಲೆ ಶಿಸ್ತಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ನೌಕರರು, ಕೆಆರ್‌ಎಸ್ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
Kshetra Samachara
01/07/2022 05:36 pm