ನವಲಗುಂದ : ಜಿಲ್ಲಾ ಪಂಚಾಯತ್ ಧಾರವಾಡ ಹಾಗೂ ತಾಲೂಕ ಪಂಚಾಯತ ನವಲಗುಂದದ 2022-23 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ಕೂಲಿ ಬೇಡಿಕೆ ಅಭಿಯಾನವನ್ನು ಸೋಮವಾರ ನವಲಗುಂದ ತಾಲೂಕಿನ ಗುಮ್ಮಗೋಳ ಗ್ರಾಮದಲ್ಲಿ ಗ್ರಾಮ ಪಂಚಾಯತ್ ವತಿಯಿಂದ ಆರಂಭಿಸಲಾಯಿತು.
ಇನ್ನು ಗುಮ್ಮಗೋಳ ಗ್ರಾಮದ ಕಿರು ಕಾಲುವೆಯ ಬಳಿ ಪೂಜೆ ಮಾಡುವ ಮೂಲಕ ಕೂಲಿ ಬೇಡಿಕೆ ಅಭಿಯಾನವನ್ನು ಆರಂಭಿಸಿ, ಕಿರು ಕಾಲುವೆಯಲ್ಲಿ ಕೆಲಸ ಮಾಡಿದರು. ಈ ಸಂಧರ್ಭದಲ್ಲಿ ಪಿಡಿಓ ಜಗದೀಶ ಹಡಪದ, ಅಧ್ಯಕ್ಷೆ ಮೀನಾಕ್ಷಿ ರಾಜು ವಡ್ಡರ, ಶ್ರೀನಿವಾಸ ಮಲ್ಲಪ್ಪ ವಡ್ಡರ, ಷಣ್ಮುಖ ಜಾವೂರ, ಅಜಯ ವಿಭೂತಿ, ಹುಸೇನ ಸೇರಿದಂತೆ ಹಲವರು ಇದ್ದರು.
Kshetra Samachara
30/05/2022 04:37 pm