ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಗುಡೇನಕಟ್ಟಿಯಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಆರಂಭ

ಕುಂದಗೋಳ : ತಾಲೂಕಿನ ಗುಡೇನಕಟ್ಟಿ ಗ್ರಾಮದಲ್ಲಿ ಆಯುಷ್ಮಾನ್ ಭಾರತ ಆರೋಗ್ಯ ಕೇಂದ್ರದ ಗುಡೇನಕಟ್ಟಿಯ ಉಪಕೇಂದ್ರವನ್ನು ಸರ್ಕಾರದ ಆದೇಶದಂತೆ ಇಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಚಿದಾನಂದ ಕುಸುಗಲ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಡಾ. ಸುಮಾ ಕಂಪ್ಲಿಕೊಪ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ಆಯುಷ್ಮಾನ್ ಭಾರತ ಇದರಿಂದ ಹಳ್ಳಿಯ ಗರ್ಭಿಣಿಯರಿಗೆ ಬಾಣಂತಿಯರಿಗೆ ವೃದ್ಧರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ಕೊಡಲು ತುಂಬಾ ಸಹಕಾರಿಯಾಗುತ್ತದೆ ಎಂದು ಹೇಳಿದರು.

ಇತ್ತಿಚೆಗೆ ಗ್ರಾಮಕ್ಕೆ ವೈದ್ಯರ ಕೊರತೆ ಹೆಚ್ಚಾಗಿದೆ ಈ ಕಾರಣ ಮುಂದೆ ಯಾವುದೇ ದಿನಗಳಲ್ಲಿ ಕಾಯಿಲೆ ಇದ್ದರು ನಮ್ಮ ಬಳಿ ಚಿಕಿತ್ಸೆ ಪಡೆದುಕೊಳ್ಳಬಹುದು ವಾರದಲ್ಲಿ ಐದು ದಿನ ಗ್ರಾಮದಲ್ಲಿ ರೋಗಿಗಳ ಜೊತೆ ನನ್ನ ಸೇವೆ ಸಲ್ಲಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ಸಂದರ್ಭದಲ್ಲಿ ಸರ್ವ ಗ್ರಾಪಂ ಸದಸ್ಯರು ಸಾರ್ವಜನಿಕರು ಮುಖಂಡ ಬಸವರಾಜ ಯೋಗಪ್ಪನವರ ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

18/04/2022 02:16 pm

Cinque Terre

20.33 K

Cinque Terre

1

ಸಂಬಂಧಿತ ಸುದ್ದಿ