ಹುಬ್ಬಳ್ಳಿ: ಅಂತೂ ಇಂತೂ ಪಬ್ಲಿಕ್ ನೆಕ್ಸ್ಟ್ ವರದಿಯಿಂದ ಶಿಥಿಲವಾದ ಕಟ್ಟಡಕ್ಕೆ ದುರಸ್ತಿ ಭಾಗ್ಯ ಬಂದಂತಾಗಿದೆ. ಪಬ್ಲಿಕ್ ನೆಕ್ಸ್ಟ್ ವರದಿಯು ಬಿಗ್ ಇಂಪ್ಯಾಕ್ಟ್ ಆಗಿದೆ.
ಹೌದು.. ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆಯ ಕಟ್ಟಡದ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ಅಪಘಾತಕ್ಕೆ ಆಹ್ವಾನಿಸುತ್ತಿರುವ ಮಹಾನಗರ ಪಾಲಿಕೆ ಎಂಬುವಂತ ವರದಿಯೊಂದನ್ನು ಬಿತ್ತರಿಸಿತ್ತು. ವರದಿ ಪ್ರಸಾರಗೊಂಡ ಬೆನ್ನಲ್ಲೇ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರು ಹಾಗೂ ಜಿಲ್ಲಾಡಳಿತ ಪಾಲಿಕೆ ಕಟ್ಟಡಕ್ಕೆ ದುರಸ್ತಿ ಭಾಗ್ಯ ಕಲ್ಪಿಸಿದೆ.
ಕಳೆದ ಸುಮಾರು ದಿನಗಳಿಂದ ಕಟ್ಟಡದ ಬಹು ಭಾಗ ಶಿಥಿಲಗೊಂಡಿತ್ತು. ಈ ನಿಟ್ಟಿನಲ್ಲಿ ನಿಮ್ಮ ಪಬ್ಲಿಕ್ ನೆಕ್ಸ್ಟ್ ಸಾರ್ವಜನಿಕ ಕಳಕಳಿಯೊಂದಿಗೆ ವರದಿಯನ್ನು ಪ್ರಸಾರ ಮಾಡಿ ಅಧಿಕಾರಿಗಳ ಗಮನಕ್ಕೆ ತಂದಿದ್ದು, ಈಗ ದುರಸ್ತಿ ಭಾಗ್ಯ ದೊರೆತಿದ್ದು, ಪಬ್ಲಿಕ್ ನೆಕ್ಸ್ಟ್ ಇಂಪ್ಯಾಕ್ಟ್ ಇದಾಗಿದೆ.
Kshetra Samachara
31/01/2022 01:19 pm