ಗದಗ: ಅಂಗನವಾಡಿಯಲ್ಲಿ ಗರ್ಭಿಣಿಯರಿಗೆ ಆಹಾರ ವಿತರಣೆ ಮಾಡುವಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ನಿಮ್ಮ ಪಬ್ಲಿಕ್ ನೆಕ್ಸ್ಟ್ ವರದಿ ಪ್ರಸಾರ ಮಾಡಿತ್ತು. ವರದಿಯಿಂದ ಎಚ್ಚೇತ್ತುಕೊಂಡ ಅಧಿಕಾರಿಗಳು ಸಿಬ್ಬಂದಿಗೆ ತರಾಟೆಗೆ ತೆಗೆದುಕೊಂಡು ಸೂಕ್ತ ಕ್ರಮಗಳನ್ನು ಜರುಗಿಸಿ ವ್ಯವಸ್ಥೆ ಸರಿಪಡಿಸಿದ್ದು, ಪಬ್ಲಿಕ್ ನೆಕ್ಸ್ಟ್ ವರದಿಯ ಇಂಪ್ಯಾಕ್ಟ್ ಆಗಿದೆ.
ಹೌದು.. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂಗನವಾಡಿ ಕೇಂದ್ರಗಳಲ್ಲಿ ಗರ್ಭಿಣಿ ಮಹಿಳೆಯರಿಗೆ ಹಾಗೂ ಮಕ್ಕಳಿಗೆ ಪೌಷ್ಟಿಕಾಂಶವುಳ್ಳ ಆಹಾರವನ್ನು ಒದಗಿಸುತ್ತಿದೆ. ಆದರೆ ಲಕ್ಷ್ಮೇಶ್ವರ ಪಟ್ಟಣದ ಅಂಗನವಾಡಿ ಕೇಂದ್ರ ಕೋಡ್ 204 ರಲ್ಲಿ ಸರಿಯಾದ ರೀತಿಯಲ್ಲಿ ಆಹಾರ ನೀಡುತ್ತಿಲ್ಲ ಎಂದು ಆರೋಪದ ಹಿನ್ನಲೇ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ಮಹಿಳಾ ಘಟಕದ ಆದ್ಯಕ್ಷೆ ಶಶಿಕಲಾ ಬಡಿಗೇರ ಆರೋಪಿಸಿದ್ದರು. ಈ ಸುದ್ದಿಯನ್ನು ಪಬ್ಲಿಕ್ ನೆಕ್ಸ್ಟ್ ವರದಿ ಮಾಡಿತ್ತು. ತಕ್ಷಣವೇ ಎಚ್ಚೇತ್ತುಕೊಂಡ ಅಧಿಕಾರಿಗಳು ತಪ್ಪಿತಸ್ಥರಿಗೆ ತರಾಟೆಗೆ ತಗೆದುಕೊಂಡು ಸರಿಯಾದ ವ್ಯವಸ್ಥೆ ಮಾಡಿ ಆಹಾರ ವಿತರಿಸಲಾಗುತ್ತದೆ.
ಇನ್ನುಮುಂದೆ ಈ ರೀತಿಯಾದ ತೊಂದರೆಯಾಗುವದಿಲ್ಲ ಎಂದು ಅಧಿಕಾರಿಗಳು ಭರವಸೆ ನೀಡಿದರು. ಬಂದಂತ ಆಹಾರವನ್ನು ಸರಿಯಾಗಿ ವಿತರಿಸಲು ಹೇಳಲಾಗಿದೆ. ಎಲ್ಲರನ್ನೂ ಸೇರಿಸಿ ಸಭೆ ಮಾಡಿ ತಪ್ಪು ಮಾಡಿದವರನ್ನು ತರಾಟೆಗೆ ತೆಗೆದುಕೊಂಡು ಸರಿಯಾದ ವ್ಯವಸ್ಥೆ ಮಾಡಬೇಕು ಸೂಕ್ತ ಕ್ರಮಕೈಗೊಳ್ಳಲಾಗಿದ್ದು, ಪಬ್ಲಿಕ್ ನೆಕ್ಸ್ಟ್ ವರದಿಯ ಬಿಗ್ ಇಂಪ್ಯಾಕ್ಟ್ ಆಗಿದೆ.
Kshetra Samachara
14/01/2022 09:12 pm