ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡ ನೂತನ ಉಪವಿಭಾಗಾಧಿಕಾರಿಯಾಗಿ ಅಶೋಕ ಅಧಿಕಾರ ಸ್ವೀಕಾರ

ಧಾರವಾಡ: ಧಾರವಾಡದ ಉಪವಿಭಾಗಾಧಿಕಾರಿಯಾಗಿದ್ದ ಗೋಪಾಲಕೃಷ್ಣ ಅವರು ಹುಬ್ಬಳ್ಳಿ, ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಾಗಿ ವರ್ಗಾವಣೆಗೊಂಡಿದ್ದು, ಅವರ ಜಾಗಕ್ಕೆ ಇದೀಗ ಕೆಎಎಸ್ ಅಧಿಕಾರಿ ಅಶೋಕ ತೇಲಿ ಅವರನ್ನು ಸರ್ಕಾರ ನಿಯುಕ್ತಿಗೊಳಿಸಿದೆ.

ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಇಂದು ಗೋಪಾಲಕೃಷ್ಣ ಅವರು ಅಶೋಕ ತೇಲಿ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಅಶೋಕ ತೇಲಿ ಅವರು ಮೂಲತಃ ವಿಜಯಪುರ ಜಿಲ್ಲೆಯ ಬಳ್ಳೊಳ್ಳಿ ಗ್ರಾಮದವರಾಗಿದ್ದು, 2014ನೇ ಬ್ಯಾಚಿನ ಕೆಎಎಸ್ ಅಧಿಕಾರಿಯಾಗಿದ್ದಾರೆ.

ಬಿಇ ಕಂಪ್ಯೂಟರ್ ಸೈನ್ಸ್‌ ಮುಗಿಸಿರುವ ಇವರು 8 ವರ್ಷ ಎಂಜಿನಿಯರ್ ಆಗಿ ಸೇವೆ ಸಲ್ಲಿಸಿದ್ದಾರೆ. 2014 ರಲ್ಲಿ ಕೆಎಎಸ್ ತೇರ್ಗಡೆಗೊಂಡು ಚಿಕ್ಕಬಳ್ಳಾಪುರದಲ್ಲಿ ತಮ್ಮ ಪ್ರೊಬೇಷನರಿ ವೃತ್ತಿ ಆರಂಭಿಸಿದರು. ಜಮಖಂಡಿ ತಾಲೂಕು ಪಂಚಾಯ್ತಿ ಇಓ ಆಗಿ, ಬೆಳಗಾವಿ ಉಪವಿಭಾಗಾಧಿಕಾರಿಯಾಗಿ ಹಾಗೂ ಸವಣೂರು ಉಪವಿಭಾಗಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ, ಇದೀಗ ಧಾರವಾಡದ ನೂತನ ಉಪವಿಭಾಗಾಧಿಕಾರಿಯಾಗಿ ಅಧಿಕಾರ ಪಡೆದುಕೊಂಡಿದ್ದಾರೆ.

Edited By : Manjunath H D
Kshetra Samachara

Kshetra Samachara

13/01/2022 11:50 am

Cinque Terre

16.1 K

Cinque Terre

0

ಸಂಬಂಧಿತ ಸುದ್ದಿ