ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಪ್ರಪ್ರಥಮ ರಾಜ್ಯ ಸರಕಾರಿ ನೌಕರರ ದಿನಾಚರಣೆ

ಕಲಘಟಗಿ: ಕಲಘಟಗಿ ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಕಲಘಟಗಿ ತಾಲೂಕು ಮಟ್ಟದ ಪ್ರಪ್ರಥಮ ರಾಜ್ಯ ಸರಕಾರಿ ನೌಕರರ ದಿನಾಚರಣೆ ಹಾಗೂ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ನಡೆಯಿತು.

ನೌಕರರ ಭವನದಲ್ಲಿ ಹಮ್ಮಿಕೊಂಡಿದ್ದ ಈ‌ ಕಾರ್ಯಕ್ರಮಕ್ಕೆ ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹಾಗೂ ಶಾಸಕ‌ ಸಿ.ಎಮ್.ನಿಂಬಣ್ಣವರ ಭಾಗಿಯಾಗಿದ್ರು. ಕಾರ್ಯಕ್ರಮದಲ್ಲಿ ಭಾಷಣ ಮಾಡಿದ ಬಸವರಾಜ್ ಹೊರಟ್ಟಿ ಸರ್ಕಾರಿ ನೌಕರರಿಗೆ ಕಿವಿ ಮಾತನ್ನ ಹೇಳಿದ್ರು. ಯಾರೂ ಕೂಡ ತಮ್ಮ ಹತ್ತಿರ ಬರುವ ಜನರ ಕಷ್ಟಗಳನ್ನ ಆಲಿಸಬೇಕು. ಅವರ ಕೆಲಸ ಬೇಗನೇ ಮಾಡಿಕೊಡಬೇಕು ಎಂದು ಹೇಳಿದ್ರು.ಅಲ್ಲದೇ ಸರ್ಕಾರಿ ನೌಕರರ NPS ತೆಗೆದುಹಾಕಲು ಈಗಾಗಲೇ ನೀವು ಮನವಿ ಮಾಡಿದ್ದು ಸರ್ಕಾರಕ್ಕೆ ಈ ಕುರಿತು ಹೇಳುತ್ತೇನೆ ಎಂದು ಭರವಸೆ ನೀಡಿದ್ರು.

ಅಧ್ಯಕ್ಷೀಯ ಭಾಷಣ ಮಾಡಿದ ಶಾಸಕ ನಿಂಬಣ್ಣವರ ಸರಕಾರಿ ನೌಕರರು ಸರಿಯಾದ ಸಮಯಕ್ಕೆ ಆಫೀಸ್ ಗೆ ಬಂದು ಕೆಲಸ ನಿರ್ವಹಣೆ ಮಾಡಬೇಕು ಎನೆ ತೊಂದರೆ ಇದ್ರು ಜನಪ್ರತಿನಿಧಿಗಳು ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಅವರ ಉದ್ದೇಶಿಸಿ ಮಾತನಾಡಿದ್ರು.

Edited By : Nagaraj Tulugeri
Kshetra Samachara

Kshetra Samachara

30/12/2021 06:29 pm

Cinque Terre

14.27 K

Cinque Terre

0

ಸಂಬಂಧಿತ ಸುದ್ದಿ