ಅಣ್ಣಿಗೇರಿ : 2006 ರಿಂದ 2018 ರ ವರೆಗೆ ಅಣ್ಣಿಗೇರಿ ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 24 ಪೌರ ಕಾರ್ಮಿಕರಿಗೆ ಪಿಎಫ್ ಹಣ ಖಾತೆಗೆ ಜಮಾ ಆಗಿಲ್ಲ ಎಂದು ಆರೋಪಿಸಿ ಬುಧವಾರ ಸಮತಾ ಸೈನಿಕ ದಳದ ಮತ್ತು ಡಾ ಬಿ.ಆರ್ ಅಂಬೇಡ್ಕರ್ ದಲಿತ ಸಂಘರ್ಷ ಸಮಿತಿ ವತಿಯಿಂದ ಅಣ್ಣಿಗೇರಿ ಪುರಸಭೆ ಎದುರು ಧರಣಿ ಸತ್ಯಾಗ್ರಹ ಮತ್ತು ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
ಪುರಸಭೆ ವ್ಯಾಪ್ತಿಯಲ್ಲಿ ಸುಮಾರು 24 ಜನರು ಪೌರ ಕಾರ್ಮಿಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅದರಲ್ಲಿ ಕೆಲವೊಂದಿಷ್ಟು ಜನ ಸರ್ಕಾರದ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇನ್ನುಳಿದ ಜನ ಗುತ್ತಿಗೆ ನೌಕರರಾಗಿ ಕಾರ್ಯ ನಿರ್ವಹಿಸುತ್ತಿದ್ದು, 2006 ರಿಂದ 2018 ರ ವರೆಗಿನ ಪಿಎಫ್ ಹಣ ಅವರ ಖಾತೆಗೆ ಜಮಾ ಆಗಿಲ್ಲಾ, ಕಾರಣ ಇದಕ್ಕೆ ಸಂಬಂಧ ಪಟ್ಟ ಸಂಪೂರ್ಣ ಮಾಹಿತಿಯನ್ನು ನೀಡುವಂತೆ ಮುಖ್ಯಾಧಿಕಾರಿ ಹತ್ತಿರ ಮನವಿ ಪತ್ರ ನೀಡಿದರೆ, ಮಾಹಿತಿ ನೀಡಲಾಗುವುದಿಲ್ಲ, ನೀವು ಧರಣಿಯಾದರು ಮಾಡಿ, ಹೋರಾಟವಾದರೂ ಮಾಡಿ ಎಂದು ಉತ್ತರ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಅನಿರ್ದಿಷ್ಟ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.
Kshetra Samachara
10/02/2021 10:20 pm