ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೆನ್ನಮ್ಮ ವೃತ್ತದ ಎಲಿವೆಟೆಡ್ ಕಾರಿಡಾರ್ ಯೋಜನೆ ಕುರಿತು ಸಾರ್ವಜನಿಕರ ಸಭೆ : ಅಭಿಪ್ರಾಯ ಸಂಗ್ರಹ

ಹುಬ್ಬಳ್ಳಿ: ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಅಧ್ಯಕ್ಷತೆಯಲ್ಲಿ, ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಚೆನ್ನಮ್ಮಾ ವೃತ್ತದ ಎಲಿವೆಟೆಡ್ ಕಾರಿಡಾರ್ ಕುರಿತು ಸಾರ್ವಜನಿಕರ ಸಭೆ ಜರುಗಿಸಿ ಅಭಿಪ್ರಾಯ ಸಂಗ್ರಹಿಸಲಾಯಿತು.

ಉದ್ದೇಶಿತ ಯೋಜನೆ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಸಾರ್ವಜನಿಕರಿಗೆ ಪ್ರಾತ್ಯಕ್ಷತೆ ಮೂಲಕ ಮಾಹಿತಿ ನೀಡಿ ಮಾತನಾಡಿದರು. ಹುಬ್ಬಳ್ಳಿ ನಾಗರಿಕರ ಅನುಕೂಲವನ್ನು ಆಧರಿಸಿ ಕಾರಿಡಾರ್ ನಿರ್ಮಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ 63 ಹಾಗೂ 218, ಹಳೆಯ ರಾಷ್ಟ್ರೀಯ ಹೆದ್ದಾರಿ 04 ರಸ್ತೆಯ ಮೇಲೆ ಕೇಂದ್ರ ಸರ್ಕಾರದ ಅನುದಾನ 298 ಕೋಟಿ ವೆಚ್ಚದಲ್ಲಿ ಎಲಿವೇಟೆಡ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಚೆನಮ್ಮಾ ವೃತ್ತದಲ್ಲಿ ಸಂಚಾರಿ ದಟ್ಟಣೆ, ರೈಲು ನಿಲ್ದಾಣದಿಂದ ವಿಮಾನ ನಿಲ್ದಾಣದ ವರೆಗೆ ಸುಗಮ ಸಂಚಾರ ಕಲ್ಪನೆಯಿಂದ ಯೋಜನೆ ರೂಪಿಸಲಾಗಿದೆ. ಯೋಜನೆಯ ಅನುಷ್ಠಾನಕ್ಕೆ 1.3 ಎಕರೆ ಭೂ ಸ್ವಾಧೀನಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಮನವಿ ಬಂದಿದೆ. ಒಟ್ಟು 25 ಕೋಟಿ ರೂಪಾಯಿಗಳನ್ನು ಭೂ ಸ್ವಾಧೀನಕ್ಕಾಗಿ ಮೀಸಲಿಡಲಾಗಿದೆ.

ಯೋಜನೆಯ ಮೊದಲ ಹಂತದಲ್ಲಿ ಗದಗ ಹಾಗೂ ಬಿಜಾಪುರ ರಸ್ತೆಯಿಂದ ಚೆನ್ಮಮ್ಮ ವೃತ್ತ ಸಂಪರ್ಕಿಸುವ ರಸ್ತೆಯಲ್ಲಿ ಮೇಲುಸೇತುವೆಯ 4 ಪಥ ರಸ್ತೆ ನಿರ್ಮಾಣ ಮಾಡಲಾಗುವುದು. ಗದಗ ರಸ್ತೆಯ ಅಂಬೇಡ್ಕರ್ ವೃತ್ತದಿಂದ ಚೆನ್ನಮಾ ವೃತ್ತದ ವರೆಗೆ 750 ಮೀಟರ್ ಮೇಲುಸೇತುವೆ ರಸ್ತೆ ನಿರ್ಮಿಸಲಾಗುವುದು. ಇದೇ ಮಾದರಿಯಲ್ಲಿ ವಿಜಯಪುರ ರಸ್ತೆಯಲ್ಲಿ 440 ಮೀಟರ್ ಮೇಲು ಸೇತುವೆ ರಸ್ತೆ ನಿರ್ಮಿಸಲಾಗುವುದು. ಹೊಸೂರು ವೃತ್ತವನ್ನು ಚೆನ್ಮಮ್ಮ ವೃತ್ತ ಮಾದರಿಯಲ್ಲಿ ಸುತ್ತು ಬಳಕೆಯ ವೃತ್ತವಾಗಿ ಮಾರ್ಪಡಿಸಲು ಅಗತ್ಯ ಸಲಹೆಗಳನ್ನು ಜಿಲ್ಲಾಡಳಿತದಿಂದ ರಾಷ್ಟ್ರೀಯ ಹೆದ್ದಾರಿ ವಿಭಾಗಕ್ಕೆ ನೀಡಲಾಗಿದೆ. ಹೊಸೂರು ವೃತ್ತದಿಂದ ಗೋಕುಲ ರಸ್ತೆಯ ವಾ.ಕ.ರ.ಸಾ.ಸಂ ಬಸ್ ನಿಲ್ದಾಣದ ವರೆಗೆ ಮೇಲು ಸೇತುವೆ ನಿರ್ಮಿಸಲಾಗುವುದು. ಇದರೊಂದಿಗೆ ಚೆನ್ನಮ್ಮ ವೃತ್ತ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಗಬ್ಬರೂ ಬೈಪಾಸ್ ವರೆಗೆ 4 ಕಿ.ಮೀ. ಮೇಲು ಸೇತುವೆ ರಸ್ತೆಯನ್ನು ಮಹಾನಗರ ಪಾಲಿಕೆ, ನಗರಾಭಿವೃದ್ಧಿ ಪ್ರಾಧಿಕಾರ ಸೇರಿದಂತೆ ಇತರೆ ಅನುದಾನದಡಿ 368 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಪರಿಸರಕ್ಕೆ ಹಾನಿಯಾಗದಂತೆ ಸಾರ್ವಜನಿಕರ ದಿನನಿತ್ಯದ ವ್ಯವಹಾರಗಳಿಗೆ ತೊಂದರೆಯಾಗದಂತೆ ಯೋಜನೆಯನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು ಎಂದರು.

 

ಆರ್ಕಿಟೆಕ್ಟ್ ಆನಂದ ಪಾಂಡರಗಿ ಹಾಗೂ ಅವರ ತಂಡ ಯೋಜನೆ ಅನುಷ್ಠಾನದಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಅಗತ್ಯ ಸಲಹೆ ಸೂಚನೆಗಳನ್ನು ನೀಡುವುದಾಗಿ ಭರವಸೆ ನೀಡಿದರು. ಮುಂದಿನ ಪೀಳಿಗೆ ಅನೂಕುಲವಾಗುವಂತೆ ದೂರದೃಷ್ಠಿಯೊಂದಿಗೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕಿದೆ. ಚೆನ್ನಮ್ಮ ವೃತ್ತ ನಗರದ ಮುಖ್ಯ ಭಾಗ. ಇದನ್ನು ಸಂರಕ್ಷಿಸಿ ಸುಂದರೀಕರಣ ಗೊಳಿಸಬೇಕಿದೆ. ನಗರದಲ್ಲಿನ ಮರಗಡಿಗಳನ್ನು ಉಳಿಸಿಕೊಂಡು ಯೋಜನೆಯ ಅನುಷ್ಠಾನಗೊಳಿಸಬೇಕು. ವೈಜ್ಞಾನಿಕವಾಗಿ ಯೋಜನೆಗೆ ಸಲಹೆ ಸೂಚನೆ ನೀಡಲು ಅಗತ್ಯ ಮಾಹಿತಿ ಹಾಗೂ ದಂತ್ತಾಂಶಗಳನ್ನು ನೀಡಿದರೆ. ವಾಸ್ತುಶಿಲ್ಪಿಗಳ ತಂಡ ರಚನಾತ್ಮಕ ಸಲಹೆಗಳನ್ನು ನೀಡಲಿದೆ ಎಂದು ಹೇಳಿದರು.

ಸಭೆಯಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳುವವರಗೆ ಯೋಜನೆಯನ್ನು ಕಾಮಗಾರಿಗೆ ಆರಂಭಿಸಭಾರದು. ಯೋಜನೆ ಅಗತ್ಯ ಇರುವ ಖಾಸಿಗೆ ಭೂಮಿಯನ್ನು ಸಹ ಸ್ವಾಧೀನ ಪಡಿಸಿಕೊಳ್ಳಬೇಕು. ಮಾನವ ಕೇಂದ್ರ ಕಲ್ಯಾಣ ಯೋಚನೆಯೊಂದಿಗೆ ಯೋಜನೆ ಅನುಷ್ಠಾನವಾಗಬೇಕು. ದಿನನಿತ್ಯ ಸಂಚಾರಿ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಬಾರದು. ನಗರದ ಸುತ್ತಲಿನ ವರ್ತಲ ರಸ್ತೆ ನಿರ್ಮಾಣ ಪೂರ್ಣಗೊಂಡ ನಂತರವೇ ಯೋಜನೆ ಆರಂಭಿಸಬೇಕು ಎಂದು ಸಾರ್ವಜನಿಕರು ಸಲಹೆ ನೀಡಿದರು.

Edited By : Nagaraj Tulugeri
Kshetra Samachara

Kshetra Samachara

29/01/2021 09:31 pm

Cinque Terre

18.31 K

Cinque Terre

5

ಸಂಬಂಧಿತ ಸುದ್ದಿ