ಗದಗ : ಈಗಾಗಲೇ ಎಲ್ಲೆಡೆ ಗ್ರಾಮ ಪಂಚಾಯಿತಿ ಚುನಾವಣೆ ಮುಕ್ತಾಯ ಕಂಡಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಹೀಗೆ ಗ್ರಾಮ ಪಂಚಾಯಿತಿ ಚುನಾವಣೆ ಗೆದ್ದು ಸದಸ್ಯರಾದವರಿಗೆ ತಮ್ಮ ಗ್ರಾಮವನ್ನು ಯಾವ ರೀತಿಯಲ್ಲಿ ಅಭಿವೃದ್ಧಿ ಮಾಡಬೇಕು ಎಂಬುದಕ್ಕೆ ಗದಗ ಜಿಲ್ಲೆಯ ಹಲಕೋಟಿ ಗ್ರಾಮ ಪಂಚಾಯಿತಿ ಸಾಧನೆ ನಿದರ್ಶನವಾಗಿದೆ.
ಹೌದು ! ಗದಗ ಜಿಲ್ಲೆಯ ಹುಲಕೋಟಿ ಗ್ರಾಮ ಪಂಚಾಯಿತಿ ಶುದ್ಧ ಕುಡಿಯುವ ನೀರು ಸರಬರಾಜುನಲ್ಲಿ 90% ಸುಗಮ ರಸ್ತೆ ಅಭಿವೃದ್ಧಿಯಲ್ಲಿ ಮುಂಚೂಣಿ ಹಾಗೂ 82.23% ಸಾಕ್ಷರತೆ ಪ್ರಮಾಣ ಸಾಧಿಸಿ ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಮೊದಲ ಸ್ಥಾನ ಪಡೆದಿದೆ. ಹಾಗೂ ಉತ್ತಮ ಜೀವನಮಟ್ಟ ರಾಷ್ಟ್ರೀಯ ಸರ್ವೇಯಲ್ಲಿ ಹಲಕೋಟಿ ಗ್ರಾಮ ಪಂಚಾಯಿತಿ ಇಡೀ ದೇಶದಲ್ಲೇ ಅತ್ಯುತ್ತಮ ಗ್ರಾಮ ಪಂಚಾಯಿತಿ ಎಂಬ ಹಿರಿಮೆಗೆ ಪಾತ್ರವಾಗಿದೆ.
ಒಟ್ಟಾರೆ 'ಹಳ್ಳಿಗಳ ಉದ್ಧಾರವೇ ದೇಶದ ಉದ್ಧಾರ' ಎಂಬ ಮಹಾತ್ಮಾ ಗಾಂಧೀಜಿಯವರ ಮಾತಿನಂತೆ ನಮ್ಮ ಗ್ರಾಮೀಣ ಪ್ರದೇಶ ಅಭಿವೃದ್ಧಿ ಹೊಂದಿದರೆ ದೇಶದ ಅಭಿವೃದ್ಧಿ ತಾನಾಗಿಯೇ ಆಗುತ್ತೆ ಎಂಬ ಮಾತನ್ನ ಹುಲಕೋಟಿ ಗ್ರಾಮ ಪಂಚಾಯಿತಿ ಸಾಬೀತು ಮಾಡಿದೆ.
Kshetra Samachara
05/01/2021 07:48 pm