ಹುಬ್ಬಳ್ಳಿ: ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆಯ ಕನ್ನಡ ಅಭಿಮಾನ ನೋಡಿದರೇ ನಿಜಕ್ಕೂ ಖುಷಿ ಎನಿಸುತ್ತದೆ. ಆದ್ರೇ ತಮ್ಮಲ್ಲಿಯೇ ಬದಲಾವಣೆ ಮಾಡದೇ ಮಹಾನಗರ ಪಾಲಿಕೆ ಊರಲ್ಲಿರುವ ನಾಮಫಲಕ ತೆರವುಗೊಳಿಸಲು ಮುಂದಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಅಷ್ಟಕ್ಕೂ ಅಲ್ಲಿ ಆಗಿದ್ದಾದರೂ ಏನು ಅಂತೀರಾ ಈ ಸ್ಟೋರಿ ನೋಡಿ..
ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಅಧಿಕಾರಿಗಳು ಇಂಗ್ಲೀಷ್ ನಾಮಫಲಕ ತೆರವುಗೊಳಿಸಿರುವುದು ನಿಜಕ್ಕೂ ಕನ್ನಡ ಅಭಿಮಾನಗಳಿಗೆ ಒಂದು ರೀತಿಯ ಖುಷಿಯನ್ನು ತಂದುಕೊಟ್ಟಿದೆ.
ಆದ್ರೇ ಹು-ಧಾ ಮಹಾನಗರ ಪಾಲಿಕೆ ಪೌರಕಾರ್ಮಿಕರು ಹಾಕಿಕೊಳ್ಳುವ ಸಮವಸ್ತ್ರದ ಮೇಲೆ ಹಾಗೂ ವಾಹನ ಮೇಲೆ ಎಚ್.ಡಿ.ಎಂ.ಸಿ ಎಂದು ಆಂಗ್ಲ ಭಾಷೆಯಲ್ಲಿ ಬರೆದಿದ್ದಾರೆ.
ಹು-ಧಾ ಮಹಾನಗರ ಪಾಲಿಕೆ ಎಂದು ಬರೆದಿದ್ದರೇ ಆಗುತ್ತಿಲ್ಲವೇ ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.
ಸರ್ಕಾರಿ ಕಚೇರಿಯಲ್ಲಿಯೇ ಕನ್ನಡವನ್ನು ಪ್ರೀತಿಸಿ ಬೆಳೆಸುವ ಮನಸ್ಥಿತಿ ಇಲ್ಲದಿರುವುದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಇನ್ನೂ ಧಾರವಾಡದಲ್ಲಿ ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು,ಕುವೆಂಪು ಅವರ ಜನ್ಮದಿನದ ಅಂಗವಾಗಿ ಇಂಗ್ಲಿಷ್ ನಾಮಫಲಕ ತೆರವುಗೊಳಿಸಿದರು.
ಆದರೇ ಹು-ಧಾ ಮಹಾನಗರ ಪಾಲಿಕೆಯಲ್ಲಿಯೇ ಇಂಗ್ಲೀಷ್ ಭಾಷೆಗೆ ಗೌರವ ನೀಡುವಷ್ಟು ಕನ್ನಡ ಭಾಷೆಗೆ ನೀಡುತ್ತಿಲ್ಲ ಎಂಬುವಂತ ಮಾತನ್ನು ಸಾರ್ವಜನಿಕರೊಬ್ಬರು ಮಾಧ್ಯಮದ ಮುಂದೆ ತಮ್ಮ ಮನದಾಳದ ಮಾತನ್ನು ಬಿಚ್ಚಿಟ್ಟಿದ್ದಾರೆ..
Kshetra Samachara
31/12/2020 04:08 pm