ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕೊರೊನಾ ಕಳೆದು ಪುನಃ ತೆರೆದಿದೆ ಆಧಾರ್ ಕೇಂದ್ರ ನೋಡ್ರಣ್ಣ

ಕುಂದಗೋಳ : ಪಟ್ಟಣದಲ್ಲಿ ಸದ್ಯ ತೆರೆದ ಒಂದೇ ಆಧಾರ್ ಕೇಂದ್ರದಿಂದ ಜನರು ಅನುಭವಿಸುತ್ತಿದ್ದ ಸಮಸ್ಯೆ ಬಗ್ಗೆ ವರದಿ ಪ್ರಕಟಿಸಿದ ಪಬ್ಲಿಕ್ ನೆಕ್ಸ್ಟ್ ಕುಂದಗೋಳದಲ್ಲಿ ಸರ್ಕಾರದ ನಿರ್ದೇಶನದಂತೆ ಮತ್ತೊಂದು ಆಧಾರ್ ಕೇಂದ್ರ ತೆರೆದು ಕೊರೊನಾ ವೈರಸ್ ಮೊದಲಿದ್ದ ಆಧಾರ ಕಾರ್ಡ್ ಅರ್ಜಿ ಗದ್ದಲದ ವಾತಾವರಣಕ್ಕೆ ಗುಡ್ ಬೈ ಹೇಳಲು ಕಾರಣವಾಗಿತ್ತು.

ಸದ್ಯ ಕೊರೊನಾ ವೈರಸ್ ಲಾಕ್ ಡೌನ್ ಸಂದರ್ಭದಲ್ಲಿ ಸ್ಥಗಿತಗೊಂಡಿದ್ದ ಆಧಾರ ಕೇಂದ್ರ ಪುನಃ ವಿವಿಧ ಇಲಾಖೆಗಳ ಸರ್ಕಾರಿ ಸಂಕೀರ್ಣ ಕಟ್ಟಡದಲ್ಲಿ ತೆರೆದಿದ್ದರೂ ಕೂಡಾ ಕೇವಲ ಬೆರಳೆಣಿಕೆಯಷ್ಟು ಜನ ಮಾತ್ರ ಆಗಮಿಸುತ್ತಿದ್ದು ಕೆಲವರಿಗೆ ಮರಳಿ ಆರಂಭವಾದ ಆಧಾರ್ ಕೇಂದ್ರ ಬಗ್ಗೆ ಮಾಹಿತಿ ತಿಳಿದಿಲ್ಲ ಸದ್ಯ ತೆರೆದಿರುವ ಆಧಾರ್ ಕೇಂದ್ರ ಸೌಲಭ್ಯವನ್ನು ಕುಂದಗೋಳ ತಾಲೂಕಿನ ಹಳ್ಳಿಗರು ಪಡೆಯಬೇಕಿದೆ.

Edited By : Manjunath H D
Kshetra Samachara

Kshetra Samachara

15/10/2020 05:10 pm

Cinque Terre

22.84 K

Cinque Terre

1

ಸಂಬಂಧಿತ ಸುದ್ದಿ