ಹುಬ್ಬಳ್ಳಿನಗರದಲ್ಲಿ ಇದೀಗ ಸ್ಮಾರ್ಟ್ ಸಿಟಿ ಯೋಜನೆಗಳು, ರಾಷ್ಟ್ರೀಯ ಹೆದ್ದಾರಿ ಯೋಜನೆ ಕಾಮಗಾರಿಗಳು,HDMC ಕಾಮಗಾರಿಗಳು, ಗ್ಯಾಸ್, ನೀರು ಸರಬರಾಜು, ಪ್ಲೈ ಓವರ್ ನಿರ್ಮಾಣ ಸೇರಿದಂತೆ ಹತ್ತಾರು ಕಾಮಗಾರಿಗಳು ನಡೆಯುತ್ತಿವೆ.
ಇಂತಹ ಹತ್ತು ಹಲವು ಕಾಮಗಾರಿಗಳು ನಡೆಯುತ್ತಿರುವ ಹುಬ್ಬಳ್ಳಿಯಲ್ಲಿ ಕಾಮಗಾರಿಗಳ ಸೈಡ್ ಎಫೆಕ್ಟ್ ಕೂಡಾ ಹೆಚ್ಚಾಗಿದೆ. ಟ್ರಾಫಿಕ್, ಸಂಚಾರ ದಟ್ಟಣೆ, ನೀರು ಸರಬರಾಜು ವ್ಯತ್ಯಯ, ಡ್ರೈನೇಜ್, ನೀರು ಪೋಲು ಆಗುತ್ತಿರುವ ಸಮಸ್ಯೆಗಳು ಕೂಡಾ ಹೆಚ್ಚಾಗಿದೆ.
ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಗುರುದತ್ ಹೆಗಡೆ ಎಲ್ಲಾ ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿ, ಅಧಿಕಾರಿಗಳಿಗೆ ತಮ್ಮ ಜವಾಬ್ದಾರಿ ನೆನಪಿಸಿದ್ದಾರೆ. ಟ್ರಾಫಿಕ್ ಪೊಲೀಸರು ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಇತರೆ ಇಲಾಖೆ ತೆಗೆದುಕೊಂಡಿಲ್ಲ ಎನ್ನುವುದು ಕೂಡಾ ಕಂಡು ಬಂದಿದೆ.
ಇನ್ನು ವಿಶೇಷವಾಗಿ ಸ್ಮಾರ್ಟ್ ಸಿಟಿ ಅಧಿಕಾರಿಗಳು,PWD, ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳು ಜವಾಬ್ದಾರಿ ಮರೆತು ಸಮನ್ವಯ ಇಲ್ಲದೆ ಇರುವುದೇ ಜನರು ಇಷ್ಟೆಲ್ಲಾ ಸಮಸ್ಯೆ ಎದುರಿಸಲು ಕಾರಣ ಎಂದು ತಿಳಿದು ಬಂದಿದೆ.
ಸದ್ಯ ಜಿಲ್ಲಾಧಿಕಾರಿಗಳ ಎಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದು ಪ್ರತಿ 2 ವಾರಕ್ಕೊಮ್ಮೆ ಸಭೆ ನಡೆಸಿ ಪರಿಶೀಲನೆ ನಡೆಸುವದಾಗಿ ತಿಳಿಸಿದ್ದಾರೆ
ವರದಿ: ಎಂ.ಕೆ. ನದಾಫ್, ಹುಬ್ಬಳ್ಳಿ
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
30/06/2022 12:33 pm