ಅಣ್ಣಿಗೇರಿ: ಪಟ್ಟಣ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ಈಗಾಗಲೇ ಬಿತ್ತನೆ ಕಾರ್ಯಗಳು ಮುಗಿದಿವೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಮತ್ತು ಕೇಂದ್ರ ಸರಕಾರದಿಂದ ರೈತರ ಬೆಳೆಗಳನ್ನು ಸಮೀಕ್ಷೆ ಮಾಡಲು ರೈತರಿಗಾಗಿ ಅಪ್ಲಿಕೇಶನ್ ಬಿಡುಗಡೆ ಮಾಡಲಾಗಿದೆ.
ರೈತರು ತಮ್ಮ ತಮ್ಮ ಹೊಲಗಳಲ್ಲಿ ಬೆಳೆಗಳಿಗೆ ಅನುಗುಣವಾಗಿ ತಮ್ಮದೇ ಮೊಬೈಲ್‌ನಿಂದ ಸರ್ವೆ ಮಾಡಿ ಅಪ್ಲೋಡ್ ಮಾಡಬೇಕೆಂದು ಕೃಷಿ ಅಧಿಕಾರಿ ಕೃಷ್ಣ ಗೌಡ ಪಾಟೀಲ್ ಅವರು ಪಟ್ಟಣದಲ್ಲಿ ತಿಳಿಸಿದರು. ಇನ್ನು ಇದರಿಂದ ಸರಕಾರದ ಬೆಂಬಲ ಬೆಲೆ ಕೇಂದ್ರಗಳಲ್ಲಿ ನಿಮ್ಮ ಧಾನ್ಯಗಳನ್ನು ತೆಗೆದುಕೊಂಡು ಹೋದಾಗ ಬೆಳೆ ವಿಮೆ ಯೋಜನೆಯಡಿ ಹಾಗೂ ಬೆಳೆಹಾನಿ ಸಂದರ್ಭದಲ್ಲಿ ಈ ದಾಖಲೆಗಳು ಬೇಕಾಗುತ್ತದೆ ಎಂದು ರೈತರಲ್ಲಿ ಬೆಳೆ ಸಮೀಕ್ಷೆ ಮಾಡಲು ಮನವಿ ಮಾಡಿದರು.
ನಂದೀಶ್, ಪಬ್ಲಿಕ್ ನೆಕ್ಸ್ಟ್ ಅಣ್ಣಿಗೇರಿ
Kshetra Samachara
30/06/2022 02:58 pm