ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ: ಕಳಸಾ ಬಂಡೂರಿ ಯೋಜನೆ ಕಾಮಗಾರಿ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಮನವಿ

ನವಲಗುಂದ: ಮಲಪ್ರಭಾ ಮಹದಾಯಿ ಕಳಸಾ ಬಂಡೂರಿ ಯೋಜನೆಯ ಕಾಮಗಾರಿಯನ್ನು ಕೂಡಲೇ ಆರಂಭಿಸಬೇಕು ಎಂದು ರೈತ ಮುಖಂಡ ಸುಭಾಸಗೌಡ ಪಾಟೀಲ ಆಗ್ರಹಿಸಿದ್ದಾರೆ.

ಪಟ್ಟಣದ ರೈತ ಭವನದಲ್ಲಿ ಮಹದಾಯಿ ಕಳಸಾ-ಬಂಡೂರಿ ರೈತ ಹೋರಾಟ ಒಕ್ಕೂಟದ ರೈತರು ಗ್ರೇಡ್ 2 ತಹಶೀಲ್ದಾರ್ ಹೊಕ್ರಾಣಿ ಅವರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು. ಅತಿವೃಷ್ಠಿಯಿಂದಾಗಿ ಸರ್ಕಾರ ಪರಿಹಾರ ಹಣ ಘೋಷಣೆ ಮಾಡಿದೆ. ಕೇವಲ ಬೆರಳೆಣಿಕೆಯಷ್ಟೇ ರೈತರಿಗೆ ಪರಿಹಾರ ಬಂದಿದೆ. ಉಳಿದ ರೈತರಿಗೆ ಪರಿಹಾರ, ಬೆಳೆ ವಿಮೆ, ಕಿಸಾನ್ ಸಮ್ಮಾನ ಹಣ ಬಂದಿರುವುದಿಲ್ಲ. ತಕ್ಷಣವೇ ಸರ್ಕಾರ ಹಣ ಬಿಡುಗಡೆ ಮಾಡಿ ರೈತರಿಗೆ ಪರಿಹಾರ ಒದಗಿಸಿ ಕೊಡಬೇಕು ಎಂದು ಒತ್ತಾಯಿಸಿದರು.

ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರು ಮಾಡಿದ 2 ಲಕ್ಷ ರೂ.ವರೆಗಿನ ಬೆಳೆ ಸಾಲಮನ್ನಾ ಯೋಜನೆ ಸ್ಥಗಿತಗೊಂಡಿದ್ದು, ಈ ಯೋಜನೆ ಪುನರಾರಂಭಿಸಿ ರೈತರ ಅನುಕೂಲ ಮಾಡಿಕೊಡಬೇಕು. ಜೊತೆಗೆ 3 ಲಕ್ಷ ರೂ.ವರೆಗೆ ಬಡ್ಡಿ ರಹಿತ ಸಾಲ ನೀಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಐ.ಡಿ.ಭಾಗವಾನ, ರಘುನಾಥ ನಡುವಿನಮಣಿ, ಬಸವನಗೌಡ ಫಕ್ಕೀರಗೌಡ್ರ, ಸಂಗಪ್ಪ ನೀಡವಣಿ, ಕರಿಯಪ್ಪ ತಳವಾರ, ಜಯರಾಜ ಹೂಗಾರ, ದ್ಯಾಮಣ್ಣ ಸಾಮೋಜಿ, ಗೋವಿಂದರೆಡ್ಡಿ ಮೊರಬ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

31/01/2022 06:26 pm

Cinque Terre

16.6 K

Cinque Terre

1

ಸಂಬಂಧಿತ ಸುದ್ದಿ