ಕುಂದಗೋಳ : ಎಕರೆಗೆ ಬೀಜ, ಗೊಬ್ಬರ, ಆಳು ಕಾಳು ಎಂದು ಇಪ್ಪತ್ತು ಸಾವಿರಕ್ಕೂ ಅಧಿಕ ಹಣ ಖರ್ಚು ಮಾಡ್ತೀವಿ ನೀವೂ ಕೊಡೋ ಪರಿಹಾರ ಹೇಕ್ಟರ್ ಅಂದಾಜು ಅದು ಪುಡಿಗಾಸು ರೈತನ ಯಾವ ಕಷ್ಟಕ್ಕೆ ಈ ಹಣ ಸಾಲುತ್ತೇ ?
ಎಸ್.! ಈ ಪ್ರಶ್ನೆ ಎದುರಾದದ್ದು ಕುಂದಗೋಳ ತಾಲೂಕಿನಲ್ಲಿ ಅತಿವೃಷ್ಟಿ ಉಂಟಾದ ಪ್ರದೇಶ ವೀಕ್ಷಿಸಲು ಬಂದ ಕೇಂದ್ರ ಅಧ್ಯಯನ ತಂಡ ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಸುಶೀಲಾ ಅವರಿಗೆ ರೈತ ಪರಶುರಾಮ ಕಲಾಲ್ ಈ ಪ್ರಶ್ನೆ ಕೇಳಿದ್ದಾರೆ.
ಕಳೆದ ಎರೆಡು ಮೂರು ವರ್ಷ ಅದರಲ್ಲೂ ಈ ವರ್ಷದ ಅತಿವೃಷ್ಟಿಗೆ ಬೇಸತ್ತ್ ರೈತರು, ಅತಿವೃಷ್ಟಿ ವೀಕ್ಷಣೆಗೆ ಬಂದು ತಂಡವನ್ನು ಕೈ ಮುಗಿದು ನಿರ್ದಿಷ್ಟ ಹೆಚ್ಚಿನ ಪರಿಹಾರ ಕೊಡಿ ಎಂದಿದ್ದಾರೆ.
ಬಳಿಕ ಕೇಂದ್ರ ಅಧ್ಯಯನ ತಂಡ ಸೂಕ್ತ ಪರಿಹಾರದ ಭರವಸೆ ನೀಡಿ ರೈತರ ಜಮೀನಿನಿಂದ ಕಾಲ್ಕಿತ್ತು, ಸಿಡಿಪಿಓ ಅನ್ನಪೂರ್ಣ ಸಂಗಳದ ನೇತೃತ್ವದಲ್ಲಿ ಅಂಗನವಾಡಿ ವೀಕ್ಷಿಸಿ ಮರಳಿದ್ದಾರೆ.
ಈ ಸಂದರ್ಭದಲ್ಲಿ ತಹಶೀಲ್ದಾರ ಅಶೋಕ್ ಶಿಗ್ಗಾಂವಿ, ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಡಾ.ಮಹೇಶ್ ಕುರಿಯವರ ಉಪಸ್ಥಿತರಿದ್ದರು.
Kshetra Samachara
17/12/2021 09:40 pm