ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ : ರೈತರ ಹೊಲಕ್ಕೆ ಭೇಟಿ ನೀಡಿದ ಕೇಂದ್ರ ನೆರೆ ತಂಡ! ಅಳಲು ತೋಡಿಕೊಂಡ ರೈತರು

ಹುಬ್ಬಳ್ಳಿ : ಜಿಲ್ಲೆಯಲ್ಲಿ ನೆರೆಪರಿಹಾರಕ್ಕಾಗಿ ಕೇಂದ್ರದಿಂದ ನೆರೆ ತಂಡ ಬಂದಿದ್ದು, ಹುಬ್ಬಳ್ಳಿ ತಾಲೂಕಿನ ಕಿರೇಸೂರು ಗ್ರಾಮದ ಹೊಲಗಳಿಗೆ ಭೇಟಿ ನೀಡಿ, ನೆರೆಯಿಂದ ಹಾಳಾದ ಬೆಳೆಯನ್ನು ವೀಕ್ಷಣೆ ಮಾಡಿದರು.

ಕೇಂದ್ರ ಅಧ್ಯಯನ ತಂಡದ ಸದಸ್ಯರಾದ ಜಲಶಕ್ತಿ ಮಂತ್ರಾಲಯದ ಗುರುಪ್ರಸಾದ ಜೆ. ಮತ್ತು ಹಣಕಾಸು ಮಂತ್ರಾಲಯದ ಮಹೇಶ ಕುಮಾರ ತಂಡದಿಂದ ಪರಿಶೀಲನೆ ನಡೆಸುತ್ತಿದ್ದ ವೇಳೆಯಲ್ಲಿ, ಬೆಳೆ ವಿಮೆ ನಮಗೆ ಸರಿಯಾಗಿ ಜಮಾ ಅಗುತ್ತಿಲ್ಲ, ಪರಿಹಾರದ ಹಣ ಇಂದಿಗೂ ಜಮಾ ಆಗಿಲ್ಲ ಎಂದು ರೈತರ ಆರೋಪ ಮಾಡಿದ್ದಾರೆ. ಮಳೆಗೆ ಸಂಪೂರ್ಣ ಬೆಳೆ ಹಾಳಾಗಿದ್ದು, ನಮಗೆ ಶೇಕಡಾ 100ರಷ್ಟು ಪರಿಹಾರ ನೀಡಬೇಕೆಂದು, ಕೇಂದ್ರ ನೆರೆ ತಂಡಕ್ಕೆ ಬೆಳೆ ನಾಶದ ಬಗ್ಗೆ ಮನವರಿಕೆ ಮಾಡುತ್ತ, ಕೇಂದ್ರ ಅಧಿಕಾರಿಗಳ ತಂಡದ ಬಳಿ ರೈತರು ಅಳಲು ತೋಡಿಕೊಂಡರು.

Edited By : Shivu K
Kshetra Samachara

Kshetra Samachara

17/12/2021 12:33 pm

Cinque Terre

14.98 K

Cinque Terre

0

ಸಂಬಂಧಿತ ಸುದ್ದಿ