ಕುಂದಗೋಳ: ತಾಲೂಕಿನಲ್ಲಿ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಮುಕ್ತಾಯಗೊಂಡಿದ್ದು, ಈಗಾಗಲೇ ಪೂರ್ಣಗೊಂಡಿರುವ ಬೆಳೆ ಸಮೀಕ್ಷೆ ವಿವರಗಳ ಕುರಿತಂತೆ ಆಕ್ಷೇಪಣೆ ಅರ್ಜಿ ಸಲ್ಲಿಸಲು ಫೆ.20 ಕೊನೆಯ ದಿನವಾಗಿದೆ.
ಆಕ್ಷೇಪಣೆಗಳು ಇದ್ದಲ್ಲಿ ಬೆಳೆ ದರ್ಶಕ ಆ್ಯಪ್ ಮೂಲಕ ಸಲ್ಲಿಸಿ ನಿಗದಿತ ದಿನಗಳ ಒಳಗಾಗಿ ಪರಿಹರಿಸಿಕೊಳ್ಳಬೇಕು. ಸರಕಾರದ ವಿವಿಧ ಇಲಾಖೆಗಳ ಯೋಜನೆಗಳಾದ ಬೆಳೆ ವಿಮಾ ಯೋಜನೆಯಡಿ ತಾಲೂಕು ಹಂತದ ಬೆಳೆ ಪರಿಶೀಲನೆ, ಕನಿಷ್ಟ ಬೆಂಬಲ ಬೆಲೆಯ ಯೋಜನೆಯಡಿ ರೈತರ ಉತ್ಪನ್ನಗಳನ್ನು ಖರೀದಿಸುವಲ್ಲಿ, ವಿಪತ್ತು ನಿರ್ವಹಣೆಯಲ್ಲಿ, ಬರ ಮತ್ತು ನೆರೆಯಿಂದ ಬೆಳೆ ಹಾನಿಗೊಳಗಾದರೆ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್ ಮಾರ್ಗಸೂಚಿ ಪ್ರಕಾರ ಸಹಾಯಧನ ನೀಡಲು ಇತ್ಯಾದಿ ಯೋಜನೆಗಳಲ್ಲಿ ಫಲಾನುಭವಿ ಆಧಾರಿತ (ಡಿಬಿಟಿ) ಕಾರ್ಯಕ್ರಮ ಅನುಷ್ಠಾನಗೊಳಿಸಲು ಬೆಳೆ ಸಮೀಕ್ಷೆಯ ದತ್ತಾಂಶ ಬಳಸಲಾಗುವುದು.
ಹೆಚ್ಚಿನ ವಿವರಗಳಿಗಾಗಿ ಕುಂದಗೋಳ ತಾಲೂಕಿನ ರೈತರು ಸಮೀಪದ ಕೃಷಿ ಇಲಾಖೆ, ಕಂದಾಯ ಇಲಾಖೆ, ತೋಟಗಾರಿಕೆ ಇಲಾಖೆಯ ಕಚೇರಿ ಸಂಪರ್ಕಿಸಲು ಸಹಾಯಕ ಕೃಷಿ ನಿರ್ದೇಶಕ ಸದಾಶಿವ ಕಾನೂರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Kshetra Samachara
18/02/2021 11:24 am