ಹುಬ್ಬಳ್ಳಿ: ಆಕೆ ವಾಣಿಜ್ಯನಗರಿ ಹುಬ್ಬಳ್ಳಿಯ ಪುಟ್ಟ ಬಾಲಕಿ. ತನ್ನ ತೊದಲು ನುಡಿಯಿಂದಲೇ ರಾಜ್ಯಾದ್ಯಂತ ಸಾಕಷ್ಟು ಹೆಸರು ಮಾಡಿದ್ದಾಳೆ. ಅಂಗಳದಲ್ಲಿ ಆಡುವ ಅಂದದ ಬಾಲೆಯ ಚಂದದ ಹಾಡಿಗೆ ರಾಜ್ಯದ ಜನರೇ ಫುಲ್ ಫೀದಾ ಆಗಿದ್ದಾರೆ. ಹಾಗಿದ್ದರೇ ಯಾರು ಈ ಪುಟ್ಟ ಬಾಲಕಿ? ಆಕೆಯ ಸಾಧನೆ ಬಗ್ಗೆ ಇಲ್ಲಿದೆ ನೋಡಿ ಒಂದು ಸ್ಟೋರಿ...
ಹೀಗೆ ಖಾಸಗಿ ವಾಹಿನಿಯೊಂದರ ಕನ್ನಡ ಕೋಗಿಲೆಯ ವೇದಿಕೆ ಮೇಲೆ ಹಾಡನ್ನು ಹೇಳುತ್ತಿರುವ ಈ ಬಾಲಕಿ ವಾಣಿಜ್ಯನಗರಿ ಹುಬ್ಬಳ್ಳಿಯ ಮಹನ್ಯಾ ಹಿರೇಮಠ. ಹೌದು... ಚಿಕ್ಕ ವಯಸ್ಸಿನಲ್ಲಿಯೇ ತನ್ನ ಕಂಠದಿಂದ ಸಾಕಷ್ಟು ಅಭಿಮಾನಿಗಳನ್ನು ಒಳಗೊಂಡಂತೆ ಸಾಕಷ್ಟು ಸಾಧನೆಯನ್ನು ಮಾಡಿದ್ದಾಳೆ.
ಅಲ್ಲದೆ, 180ಕ್ಕೂ ಹೆಚ್ಚು ಹಾಡುಗಳನ್ನು ಕಂಠಪಾಠ ಮಾಡಿ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ದಾಖಲೆ ಮಾಡಿದ್ದಾಳೆ. 900ಕ್ಕೂ ಅಧಿಕ ಸಭಾ ಕಾರ್ಯಕ್ರಮವನ್ನು ಮಾಡಿರುವ ಮಹನ್ಯಾ ಹಿರೇಮಠ, ಹಿರಿಯ ನಾಯಕ ನಟರ ಜೊತೆಗೆ ಹಿರಿಯ ಸಂಗೀತಕಾರರೊಂದಿಗೆ ಹಾಡುವ ಮೂಲಕ ಸಂಗೀತಕ್ಕೆ ಸಾಕ್ಷಿಯಾಗಿದ್ದಾರೆ.
'ಕನ್ನಡದ ಕೋಗಿಲೆ' ಅಂತಹ ಬಹುದೊಡ್ಡ ಕಾರ್ಯಕ್ರಮದಲ್ಲಿ ಹಾಡುವ ಮೂಲಕ ಸಾಧನೆ ಮಾಡಿದ್ದು ಹುಬ್ಬಳ್ಳಿಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
2ನೇ ತರಗತಿಯಲ್ಲಿ ಓದುತ್ತಿರುವ ಮಹನ್ಯಾ, ಸಾಕಷ್ಟು ಜ್ಞಾಪಕ ಶಕ್ತಿಯೊಂದಿಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ಮಾಡಿದ್ದು, ಎಸ್.ಪಿ.ಬಾಲಸುಬ್ರಹ್ಮಣ್ಯಂ, ವಿಜಯ ಪ್ರಕಾಶ್, ಹಂಸಲೇಖ ಸೇರಿದಂತೆ ಸಂಗೀತ ದಿಗ್ಗಜರ ಜೊತೆಗೆ ಹಾಡಿ ವಾಣಿಜ್ಯನಗರಿ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿದ್ದಾರೆ. ಮಗಳ ಈ ಸಾಧನೆಗೆ ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/03/2022 05:41 pm