ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಕಮಡೊಳ್ಳಿ ಪ್ರಾಥಮಿಕ ಪ್ರೌಢ ಶಾಲೆ ಶಿಕ್ಷಕರಿಗೆ ಗುರುವಂದನೆ

ಕುಂದಗೋಳ : ತಾಲೂಕಿನ ಕಮಡೊಳ್ಳಿ ಗ್ರಾಮದ ಆರ್.ವ್ಹಿ.ಪಾಟೀಲ್ ಸರಕಾರಿ ಪ್ರೌಢ ಶಾಲೆಯಲ್ಲಿ 2007-2008ನೇ ಸಾಲಿನ 7ನೇ ತರಗತಿ ಮತ್ತು 2010-2011 ನೇ ಸಾಲಿನ ಹತ್ತನೇ ತರಗತಿ ವಿದ್ಯಾರ್ಥಿ ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮದಲ್ಲಿ ತಮಗೆ ಕಲಿಸಿದ ಪ್ರಾಥಮಿಕ, ಪ್ರೌಡ ಮತ್ತು ಕಾಲೇಜು ಶಿಕ್ಷಕರನ್ನು ಸೇರಿಸಿ ಸುಮಾರು 80 ಶಿಕ್ಷಕರಿಗೆ ಸನ್ಮಾನಿಸುವುದರ ಮುಖಾಂತರ ಅಭಿನಂದನಾ ಪೂರ್ವ ಘಟನೆಗೆ ಸಾಕ್ಷಿಯಾದರು.

ಈ ಸಂದರ್ಭದಲ್ಲಿ ಎರಡು ಕ್ಷೇತ್ರ ಮಠದ ಮಠಾಧೀಶರು ಸಾನಿಧ್ಯ ವಹಿಸಿದ್ದರು, ಶಾಲೆಯ ಭೂ ದಾನಿಗಳು ಕಾರ್ಯಕ್ರಮವನ್ನು ಉದ್ಘಾಟಿಸಿದರು, ಹಾಗೂ ಪ್ರಾಚಾರ್ಯರು ಹಾಗೂ ಹಿರಿಯ ಉಪನ್ಯಾಸಕರು ಮಾತನಾಡಿ ತಾವು ವಿದ್ಯಾರ್ಥಿಗಳ ಜೊತೆಗೆ ಯಾವ ರೀತಿ ಒಡನಾಟವನ್ನು ಇಟ್ಟುಕೊಂಡಿದ್ದರು ಎನ್ನುವುದನ್ನು ಮೆಲಕು ಹಾಕಿದರು.

ಇದೇ ಸಂದರ್ಭದಲ್ಲಿ ಎಸ್.ಎಂ.ಕಮತರ ಪ್ರಾಚಾರ್ಯರು ಯುವಕರು ಮಾಡಿದ ಮಹಾನಕಾರ್ಯಕ್ಕೆ ಶ್ಲಾಘನೆ ನೀಡಿದರು, ಜೊತೆಗೆ ಇಂತಹ ಒಳ್ಳೆಯ ಕಾರ್ಯಕ್ರಮಗಳು ಈ ಕಮಡೊಳ್ಳಿ ಪವಿತ್ರ ಕ್ಷೇತ್ರದಲ್ಲಿ ಹಮ್ಮಿಕೊಂಡು ತಮ್ಮೆಲ್ಲರನ್ನೂ ಸನ್ಮಾನಿಸಿರುವುದು ನಮ್ಮ ಪೂರ್ವಜನ್ಮದ ಪುಣ್ಯವೆಂದು ಹೇಳಿಕೊಂಡರು.

Edited By : PublicNext Desk
Kshetra Samachara

Kshetra Samachara

11/07/2022 01:57 pm

Cinque Terre

15.37 K

Cinque Terre

0

ಸಂಬಂಧಿತ ಸುದ್ದಿ