ಕುಂದಗೋಳ: ತಾಲೂಕಿನ ಬು.ಕೊಪ್ಪ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಗ್ರೀನ್ ಡೇ ಆಚರಿಸಲಾಯಿತು.
ವಿದ್ಯಾರ್ಥಿಗಳಿಗೆ ಬಣ್ಣದ ಪರಿಕಲ್ಪನೆ ಮೂಡಿಸುವ ಉದ್ದೇಶದಿಂದ ಇಂದು ಗ್ರೀನ್ ಡೇ ಆಚರಣೆ ಮಾಡುವುದರ ಜೊತೆಗೆ ಹಸಿರು ಬಣ್ಣದ ಮಹತ್ವವನ್ನು ಎಲ್ಲಾ ಮಕ್ಕಳಿಗೂ ಶಿಕ್ಷಕರು ತಿಳಿಸಿದರು.
ಈ ವೇಳೆ ಪ್ರಧಾನ ಗುರು ಎಸ್.ಎಮ್.ಮುಲ್ಲಾ, ಶಿಕ್ಷಕಿಯರಾದ ಲತಾ ಪಟಗಾರ, ಅತಿಥಿ ಶಿಕ್ಷಕಿಯರಾದ ಬಸಮ್ಮ ದೊಡ್ಡೋಲಿ ಹಾಗೂ ಅಡುಗೆ ಸಹಾಯಕಿಯರು ಸಹ ಹಸಿರು ಬಣ್ಣದ ಉಡುಪು ಧರಿಸಿ ಹಸಿರು ಬಣ್ಣದ ಡೇ ಗೆ ಮೆರಗು ತಂದರು ಎಲ್ಲಾ ಮಕ್ಕಳು ಹಸಿರು ಬಣ್ಣದ ಉಡುಪಿನೊಂದಿಗೆ ತುಂಬಾ ಖುಷಿಯಿಂದ ಪಾಲ್ಗೊಂಡಿದ್ದರು.
Kshetra Samachara
06/07/2022 12:17 pm