ಹುಬ್ಬಳ್ಳಿ: ವೇಮನ ವಿದ್ಯಾವರ್ಧಕ ಸಂಘದ ಕೆ.ಎಚ್ ಪಾಟೀಲ್ ಸ್ನಾತಕ ಹಾಗೂ ಸ್ನಾತಕೋತ್ತರ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ 'ಕಾಮರ್ಸ್ ಹಬ್ಬ' ಮಾದರಿ ಪ್ರದರ್ಶನ ಹಮ್ಮಿಕೊಳ್ಳಲಾಗಿತ್ತು.
ಈ ಮಾದರಿ ಪ್ರದರ್ಶನ ಕಾರ್ಯಕ್ರಮದಲ್ಲಿ ನಿವೃತ್ತ ವಾಣಿಜ್ಯ ತೆರಿಗೆ ಇಲಾಖೆಯ ಉಪಆಯುಕ್ತ ಜಿ.ಬಿ ಗೌಡಪ್ಪಗೋಳ ಮುಖ್ಯ ಅಥಿತಿಗಳಾಗಿ ಆಗಮಿಸಿದ್ದರು. ವೇಮನ ವಿದ್ಯಾವರ್ಧಕ ಸಂಘದ ಗೌರವ ಕಾರ್ಯದರ್ಶಿ ಆರ್.ಕೆ ಪಾಟೀಲ್ ಕಾರ್ಯಕ್ರಮ ಉದ್ಘಾಟಿಸಿದರು. ಪ್ರದರ್ಶನ ವೀಕ್ಷಿಸಿದ ಮುಖ್ಯ ಅಥಿತಿ ಜಿ.ಬಿ ಗೌಡಪ್ಪಗೋಳ ಮಾತನಾದಿ, ವಾಣಿಜ್ಯ ನಮ್ಮ ನಿತ್ಯಜೀವನದಲ್ಲಿ ಹಾಸುಹೊಕ್ಕಾಗಿದೆ ಪ್ರಯೋಗತ್ಮಕವಾಗಿ ಕಲಿಯುವುದು ಶಾಶ್ವತ ಜ್ಞಾನ ಒದಗಿಸುತ್ತದೆ ಎಂದು ಹೇಳಿದರು.
ನಂತರ ಮಾತನಾಡಿದ ಆರ್ ಕೆ ಪಾಟೀಲ್ ವಿದ್ಯಾರ್ಥಿಗಳಲ್ಲಿರುವ ಕೌಶಲ್ಯವನ್ನು ಹೊರಹಕಾಲು ಇಂತಹ ಕಾರ್ಯಕ್ರಮ ಅವಶ್ಯಕ ಅಂತ ಹೇಳಿದರು. ಎಚ್ ಎಚ್ ಕಿರೇಸೂರ, ಡಾ. ಶಿವರಾಂ ಪಾಟೀಲ ಹಾಗೂ ಪ್ರಾಚಾರ್ಯರಾದ ಎಸ್.ಬಿ ಸಣಗೌಡರ ಮಾದರಿಗಳನ್ನು ವೀಕ್ಷಿಸಿ ಸಂಕ್ಷಿಪ್ತ ಮಾಹಿತಿಯನ್ನು ಪಡೆದರು. ಬಿ.ಕಾಂ ಮೊದಲ ವರ್ಷದ ವಿದ್ಯಾರ್ಥಿಗಳು ತಯಾರಿಸಿದ ಸ್ಮಾರ್ಟ್ ಇಕೋ ವಿಲೇಜ್ ಎಂಬ ಪರಿಕಲ್ಪನೆ ಅತಿ ಹೆಚ್ಚು ಗಮನ ಸೆಳೆಯಿತು. ಮತ್ತು ಇ ಮಾದರಿಯನ್ನು ನಾವು ನಿಜವಾಗಿಯೂ ಅಳವಡಿಸಿಕೊಂಡಲ್ಲಿ ಮಾಲಿನ್ಯ ರಹಿತ ವಾತಾವರಣ ಸೃಷ್ಟಿಸಲು ಸಾಧ್ಯ ಎಂಬ ಅಭಿಪ್ರಾಯ ವ್ಯಕ್ತವಾಯಿತು. ಈ ಕಾರ್ಯಕ್ರಮದಲ್ಲಿ ಬೋಧಕ ಬೋಧಕೇತರ ಸಿಬ್ಬಂದಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
Kshetra Samachara
17/06/2022 03:27 pm