ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

PSI ನೇಮಕಾತಿ ರದ್ದು: ಧಾರವಾಡದಲ್ಲಿ ಅಭ್ಯರ್ಥಿಗಳ ವಿಜಯೋತ್ಸವ

ಧಾರವಾಡ: 545 ಜನ ಪಿಎಸ್‌ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಈ ಅಕ್ರಮದ ವಿರುದ್ಧ ಮೊದಲು ಧ್ವನಿ ಎತ್ತಿದ್ದು ಧಾರವಾಡ. ಧಾರವಾಡದ ಅಭ್ಯರ್ಥಿಗಳು ಈ ನೇಮಕಾತಿ ವಿರುದ್ಧ ಪ್ರತಿಭಟನೆಗಿಳಿದಿದ್ದು, ರಾಜ್ಯದ ಗಮನಸೆಳೆದಿತ್ತು. ಅಲ್ಲದೇ ಈ ನೇಮಕಾತಿ ಅಕ್ರಮದಲ್ಲಿ ಪಾಲ್ಗೊಂಡ ದೊಡ್ಡ ದೊಡ್ಡ ಕುಳಗಳನ್ನು ಈಗಾಗಲೇ ಕಂಬಿ ಹಿಂದೆ ತಳ್ಳಲಾಗಿದೆ. ಇದರ ಬೆನ್ನಲ್ಲೇ ಇದೀಗ ರಾಜ್ಯ ಸರ್ಕಾರ 545 ಪಿಎಸ್‌ಐ ನೇಮಕಾತಿ ಪರೀಕ್ಷೆಗಳನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದು, ಧಾರವಾಡದಲ್ಲಿನ ಪಿಎಸ್‌ಐ ಅಭ್ಯರ್ಥಿಗಳು ವಿಜಯೋತ್ಸವ ಆಚರಿಸಿದರು.

ಮೊದಲು ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ನಡೆದಿದೆ ಎಂದು ಧಾರವಾಡದಲ್ಲಿ ಪಿಎಸ್ಐ ಅಭ್ಯರ್ಥಿಗಳು ವಿವಿಧ ದಾಖಲೆಗಳನ್ನು ತೆಗೆದು ಅದರ ವಿರುದ್ಧ ಧ್ವನಿ ಎತ್ತಿದ್ದರು. ಅಲ್ಲದೇ ಆ ದಾಖಲೆಗಳನ್ನು ಕೆಲ ಜನಪ್ರತಿನಿಧಿಗಳ ಗಮನಕ್ಕೂ ತಂದು ಅದರ ಬಗ್ಗೆ ಸರ್ಕಾರದ ಗಮನಸೆಳೆಯುವಂತೆ ಮಾಡಿದ್ದರು. ಆ ಪ್ರಕಾರ ಸರ್ಕಾರ ಇದರ ಬಗ್ಗೆ ತನಿಖೆ ನಡೆಸಿ ಇದೀಗ ಹಲವರನ್ನು ಬಂಧಿಸಿದೆ. ಅಲ್ಲದೇ ಈಗಾಗಲೇ ನಡೆದ ಪಿಎಸ್‌ಐ ಪರೀಕ್ಷೆಗಳನ್ನೇ ರದ್ದು ಮಾಡಿ ಆದೇಶ ಹೊರಡಿಸಿದೆ.

ಈಗಾಗಲೇ ಅಕ್ರಮದಿಂದ ನಡೆದ ಪರೀಕ್ಷೆಗಳು ರದ್ದಾಗಿದ್ದು, ಇನ್ನುಮುಂದೆ ನಡೆಯುವ ಪರೀಕ್ಷೆಗಳು ಆನ್‌ಲೈನ್ ಮುಖಾಂತ ನಿಸ್ಪಕ್ಷಪಾತವಾಗಿ ನಡೆಯಬೇಕು. ಈಗಾಗಲೇ ಅಕ್ರಮ ಎಸಗಿದ ಆರೋಪಿಗಳಿಗೆ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಅಭ್ಯರ್ಥಿಗಳು ಆಗ್ರಹಿಸಿದರು.

Edited By : Shivu K
Kshetra Samachara

Kshetra Samachara

29/04/2022 05:05 pm

Cinque Terre

16.15 K

Cinque Terre

1

ಸಂಬಂಧಿತ ಸುದ್ದಿ