ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಇಂಗ್ಲಿಷ್ ಬಿತ್ತಿ ಚಿತ್ರಗಳ ಪ್ರದರ್ಶನದ ಉದ್ಘಾಟನೆ

ಅಣ್ಣಿಗೇರಿ: ತಾಲೂಕಿನ ಹಳ್ಳಿಕೇರಿ ಗ್ರಾಮದ ಕೃಷ್ಣ ಪ್ರೌಢ ಶಾಲೆಯಲ್ಲಿ ಇಂಗ್ಲಿಷ್ ಬಿತ್ತಿ ಚಿತ್ರಗಳ ಪ್ರದರ್ಶನದ ಕಾರ್ಯಕ್ರಮವನ್ನು ಎಸ್.ಟಿ.ಗಿರಡ್ಡಿ ಉದ್ಘಾಟಿಸಿದರು.

ಇಂಗ್ಲಿಷ್ ಬಿತ್ತಿ ಚಿತ್ರಗಳ ಪ್ರದರ್ಶನವನ್ನು ಜಿಲ್ಲಾ ಪಂಚಾಯತಿಯ ಮಾಜಿ ಸದಸ್ಯೆ ರೇಣುಕಾ ಇಬ್ರಾಹಿಂಪುರ್ ಉದ್ಘಾಟಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶಿಲ್ಪಾ ಮೊರಬದ ಆಗಮಿಸಿ ವಿದ್ಯಾರ್ಥಿಗಳಿಗೆ ಪಂಚೇಂದ್ರಿಯಗಳ ಬಗ್ಗೆ ತಿಳುವಳಿಕೆಯನ್ನು ನೀಡಿದರು. ಇದೇ ವೇಳೆ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕೃಷ್ಣ ಪ್ರೌಢಶಾಲೆಯ ಇಂಗ್ಲಿಷ್ ಶಿಕ್ಷಕರಾದ ರವಿಕುಮಾರ್ ಬೆಳಹಾರ ಅವರು ಸ್ವಾಗತ ಭಾಷಣ ಮಾಡಿದರು. ಅಣ್ಣಿಗೇರಿ ಸಿಆರ್‌ಸಿ ಎರಡರ ಸಂಯೋಜಕ ಮಂಜುನಾಥ್ ನಾಯಕ್ ಅವರು ಮಾತನಾಡಿ, 'ಇಂಥದೊಂದು ಇಂಗ್ಲಿಷ್ ಪ್ರದರ್ಶನ ಆಗಿದ್ದು ಸಂತೋಷದ ವಿಷಯ. ಬರುವ ದಿನಗಳಲ್ಲಿ ನಮ್ಮ ಶಾಲೆಯಲ್ಲಿ ಈ ತರಹದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತದೆ' ಎಂದು ತಿಳಿಸಿದರು.

ಈ ವೇಳೆ ಕೃಷ್ಣ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳು, ಪಾಲಕರು, ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕ-ಶಿಕ್ಷಕಿಯರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Edited By : Nagesh Gaonkar
Kshetra Samachara

Kshetra Samachara

05/02/2022 08:25 am

Cinque Terre

59.62 K

Cinque Terre

1

ಸಂಬಂಧಿತ ಸುದ್ದಿ